ಮಂಗಳೂರು:: ರಾಷ್ಟ್ರೀಯ ಹೆದ್ದಾರಿ 66 ರ ಕೂಳೂರು ರಾಯಲ್ ಓಕ್ ಮುಂಭಾಗದಲ್ಲಿ ರಸ್ತೆ ಗುಂಡಿಗೆ ಸಿಲುಕಿ ಸ್ಕೂಟರ್ ನಿಂದ ಉರುಳಿ ಬಿದ್ದ ಮಹಿಳೆಯ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ, 8:30 ಗಂಟೆ ಸುಮಾರಿಗೆ ನಡೆದಿದೆ .
ಘಟನೆಯ ಪರಿಣಾಮ ಮೂಲತ: ಮಣಿಪಾಲ ವರ್ಕಳ ನಿವಾಸಿ ಸದ್ಯ ಚಿತ್ರಾಪುರದಲ್ಲಿ ನೆಲೆಸಿದ್ದ ಮಾಧವಿ (37) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರು ಎಜೆ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಟೆಕ್ನಿಷಿಯನ್ ಆಗಿದ್ದು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗುವಾಗ ಘಟನೆ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಅವರು ಸ್ಥಳದಲ್ಲಿ ಮೃತಪಟ್ಟಿದ್ದು ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳೀಯರು ಸರಕಾರದ ಕಳಪೆ ರಸ್ತೆಯ ವಿರುದ್ಧ ಕೆರಳಿದ್ದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ .