ಉಳ್ಳಾಲ: ಮಂಗಳೂರಿಂದ ಚೆನೈ ನಡುವೆ ಸಂಚರಿಸುವ ಚೆನ್ನೈ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲಿಗೆ ಯುವಕ ನೋರ್ವನು ತಲೆಯನ್ನು ಇಟ್ಟು ಆತ್ಮಹತ್ಯೆ ಮಾಡಿರುವ ರೀತಿಯಲ್ಲಿ ಶವವೊಂದು ಪತ್ತೆಯಾಗಿದೆ.
ಮೃತ ದೇಹವು ಉಳ್ಳಾಲ ರೈಲ್ವೇ ನಿಲ್ದಾಣದ ಬಳಿಗೆ ಸಿಕ್ಕಿದೆ. ಯುವಕ ಆತ್ಮ ಹತ್ಯೆ ಮಾಡಿರುವುದಾಗಿ ಶಂಕಿಸಲಾಗಿದೆ. ಕಣ್ಣೂರು ಭಾಗಕ್ಕೆ ತೆರಳುವ ಪ್ಯಾಸೆಂಜರ್ ರೈಲು, ಮಾವೇಲಿ ಎಕ್ಸ್ಪ್ರೆಸ್ ಸೇರಿ ಹಲವು ರೈಲು ಸಂಚಾರದ ಸಮಯದಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಮಂಗಳೂರು ಕಣ್ಣೂರು ನಡುವಿನ ಪ್ಯಾಸೆಂಜರ್ ರೈಲು ವಿಳಂಬದಿಂದ ಯಾತ್ರಾರ್ಥಿಗಳು ತುಂಬಾನೇ ತ್ರಾಸ ಪಡುವಂತೆ ಆಯಿತು.