ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಡಿಜೆ , ಮೈಕ್ , ಮೆರವಣಿಗೆಗೆ ಪೊಲೀಸ್ ಇಲಾಖೆ ವಿಧಿಸಿರುವ ನಿರ್ಬಂಧಗಳಿಂದ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಾ ಇದೆ . ಈ ನಿರ್ಬಂಧಗಳಿಗೆ ಕಾರಣ ಹಿಂದೂಪರ ಸಂಘನೆ ಆಗಿದೆ . ಜಿಲ್ಲೆಯ ಶಾಂತಿ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಪೊಲೀಸ್ ಅಧಿಕಾರಿಗಳು ಈ ರೀತಿಯ ನಿಯಮವನ್ನು ಕೈಗೊಂಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ತಿಳಿಸಿದರು .
ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ೪ ತಿಂಗಳ ಹಿಂದೆ ಅಶಾಂತಿಯ ವಾತಾವರಣ ಇತ್ತು . ಆದರೆ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಬದಲಾವಣೆಯಿಂದ ಇಲ್ಲಿನ ಅಕ್ರಮ ಚಟುವಟಿಕೆಗಳು, ಡ್ರಗ್ಸ್ ಹಾವಳಿ , ಕೊಲೆ ಪ್ರಕರಣಗಳು , ಅಶಾಂತಿ ವಾತಾವರಣ ದೂರವಾಗುತ್ತದೆ . ಈ ಅಶಾಂತಿ ವಾತಾವರಣವನ್ನು ದೂರ ಮಾಡಲು ಈ ರೀತಿಯ ಕಠಿಣ ನಿಯಮವನ್ನು ಜಾರಿಗೆ ತರಬೇಕಾಯಿತ್ತು ಎಂದರು .
೧೦. ೩೦ ರ ನಂತರ ಕಾರ್ಯಕ್ರವನ್ನು ನಿರ್ಬಂಧ ಹೇರಬೇಕೆಂಬ ನಿಯಮ ಚರ್ಚೆಗೆ ಬಂದದ್ದು ಬೊಮ್ಮಾಯಿ ಸರಕಾರದ ಅವಧಿಯಲ್ಲಿ . ಆ ಸಮಯದಲ್ಲಿ ಇಲ್ಲಿನ ಸ್ಥಳೀಯ ಶಾಸಕರು , ಪಕ್ಷದ ಸದಸ್ಯರು ಯಾವುದೇ ರೀತಿಯ ಅಪಸ್ವರವನ್ನು ಎತ್ತಿರಲಿಲ್ಲ . ಆದರೆ ಆ ಕಾನೂನು ಅಂದು ಅನುಷ್ಠಾನಕ್ಕೆ ಬರಲಿಲ್ಲ . ಆದರೆ ಇಲ್ಲಿ ನಡೆದ ಅಶಾಂತಿ ವಾತಾವರಣವು ಈ ಕಾನೂನು ಜಾರಿಯ ಅನಿವಾರ್ಯತೆಯನ್ನು ಹೆಚ್ಚಿಸಿತು . ಹಾಗಾಗಿ ಈ ಕಾನೂನನ್ನು ಜಾರಿಗೆ ತರಲಾಗಿದೆ . ಇಲ್ಲಿನ ಹಿಂದೂ ಸಂಘಟನೆಗಳ ಕೋಮು ಪ್ರಚೋದನೆಯ ಹೇಳಿಕೆಗಳು ಡಿಜೆ , ಮೈಕ್ ಬಂದ್ ಆಗಲು ಕಾರಣವಾಗಿದೆ ಎಂದರು .
ಜಿಲ್ಲೆಯ ಹೆದ್ದಾರಿಯ ಟೋಲ್ ಅನ್ನು ಸಂಗ್ರಹ ಮಾಡಲಾಗುತ್ತದೆ ಆದರೆ ಸುಸ್ಥಿತಿಯ ಮಾರ್ಗವನ್ನು ಹೆದ್ದಾರಿ ಇಲಾಖೆ ನೀಡುವುದಿಲ್ಲ . ಈ ಟೋಲ್ ಹಣ ಎಲ್ಲಿ ವ್ಯಯ ಆಗುತ್ತಿದೆ ಎಂಬುದು ಗೊತ್ತಿಲ್ಲ . ಮೊನ್ನೆ ರಸ್ತೆ ಅಪಘಾತದಿಂದ ಮಹಿಳೆಯೊಬ್ಬಳು ಮರಣ ಅಪ್ಪಿದಳು . ಆದರೆ ಬಿಜೆಪಿ ಜನ ಪ್ರತಿನಿಧಿಗಳು ಈ ಬಗ್ಗೆ ಮಾತಾಡಿಲ್ಲ . ಒಂದು ವೇಳೆ ಇಲ್ಲಿ ಮುಸ್ಲಿಂ ರಿಂದ ಹಿಂದೂವಿನ ಕೊಲೆ ಏನಾದ್ರೂ ನಡೆದಿದ್ದರೆ ಜನ ಪ್ರತಿನಿಧಿಗಳು ಧಾಮಿಸುತ್ತಿದ್ದರು , ಬಿಜೆಪಿ ವೋಟ್ ಬ್ಯಾಂಕ್ ವರ್ತನೆಯನ್ನು ಕಾಣಿಸುತ್ತಿದ್ದರು .
ಹಿಂದೂಗಳ ಹಬ್ಬಕ್ಕೆ ಸರಕಾರ ತಾರತಮ್ಯದ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ಹೇಳುತ್ತಾ ಬರುತ್ತಿದೆ ಆದರೆ ಸರಕಾರ ಸರ್ವ ಧರ್ಮಿಯರಿಗೂ ಸಮಾನ ಕಾನೂನನ್ನು ಜಾರಿಗೆ ತಂದಿದೆ ಎಂದರು
ಹೆದ್ದಾರಿಯ ಕಳಪೆ ಕಾಮಗಾರಿಯನ್ನು ವಿರೋಧಿಸಿ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಪ್ರತಿಭಟನೆಯನ್ನು ನಾಳೆ ಹಮ್ಮಿಕೊಳ್ಳಲಾಗುವುದು .ಬೆಳಿಗ್ಗೆ ೧೦ ಗಂಟೆಗೆ ನಗರದ ನಂತೂರು ಸರ್ಕಲ್ ನಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆವರೆಗೆ ಪ್ರತಿಭಟನೆ ನಡೆಯಲಿದೆ . ಇದರಲ್ಲಿ ಜನ ಪ್ರತಿನಿಧಿಗಳು , ವಿಧಾನ ಪರಿಷತ್ ಶಾಸಕರುಗಳು , ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು .
ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ , ಮಾಜಿ ಮೇಯರ್ ಶಶಿಧರ್ ಹೆಗ್ಡೆ , ಮುಖಂಡರಾದ ಅಪ್ಪಿ ಎಸ್ , ಶಾಹುಲ್ ಹಮೀದ್ , ವಿಕಾಸ್ ಶೆಟ್ಟಿ , ನೀರಜ್ ಪಾಲ್ ಮುಂತಾದವರು ಉಪಸ್ಥಿತತರಿದ್ದರು .