ಮಂಗಳೂರು: ಮಿಲಾಗ್ರಿಸ್ ಕಾಲೇಜು ಮಂಗಳೂರು ಹಾಗೂ ಯೂಸ್ಟ್ ಬುಕ್ ಆರ್ ಇದರ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 16 ರಿಂದ 21ರ ವರೆಗೆ ಮೂರು ಸಾವಿರಕ್ಕಿಂತಲೂ ಅಧಿಕ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟವು ಮಿಲಾಗ್ರಿಸ್ ಬುಕ್ ಕ್ವೆಸ್ಟ್’ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಆಲ್ವಿನ್ ಸೆರಾವ್ ತಿಳಿಸಿದರು .
ಅವರು ಪತ್ರಿಕಾಭನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಮಕ್ಕಳಲ್ಲಿ ಇಂದು ಪುಸ್ತಕವನ್ನು ಓದುವ ಹವ್ಯಾಸ ಕಡಿಮೆ ಆಗ್ತಾ ಇದೆ , ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ . ಮಂಗಳೂರು ನಗರದ ವಿವಿಧ ಶಾಲಾ-ಕಾಲೇಜುಗಳು, ಪುಸ್ತಕ ಪ್ರೇಮಿಗಳು ಈ ಪುಸ್ತಕ ಪ್ರದರ್ಶನ ಹಾಗೂ ಮಾರಾಟದಲ್ಲಿ ಭಾಗವಹಿಸಿ ಇದರ ಸದುದ್ದೇಶವನ್ನು ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು .
ಪುಸ್ತಕ ಪ್ರದರ್ಶನದಲ್ಲಿ ದೇಶದಾದ್ಯಂತ ಪುಸ್ತಕ ಮಾರಾಟಕ್ಕೆ ಪ್ರಸಿದ್ಧಿಯನ್ನು ಪಡೆದ ತಮಿಳುನಾಡಿನ ಕೊಯಂಬತ್ತೂರಿನ ತರುಣ್ ತೇಜಸ್ ಗಂಗಮ್ ಮತ್ತು ತಕ್ಷಿಣಿ ಅಶೋಕ್ ಕುಮಾರ್ ರಿಂದ ಸ್ಥಾಪಿಸಲ್ಪಟ್ಟ ಯೂಸ್ಟ್ ಬುಕ್ ಆರ್ ಎಂಬ ಸಂಸ್ಥೆಯು ಇದರ ಪೂರ್ಣ ಸಹಕಾರ ಇರಲಿದ್ದು . ಈ ಸಂಸ್ಥೆಯು ಈಗಾಗಲೇ ಹಲವಾರು ಜನರಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಡಿಮೆ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡುತ್ತಿದೆ . ಪ್ರದರ್ಶನ ಮಳಿಗೆಯಲ್ಲಿ ಪುಸ್ತಕಗಳನ್ನು ಕಿಲೋ ದರದಲ್ಲಿ ಹೊಸ ಪುಸ್ತಕಗಳ ಮಾರಾಟ ಮಾಡುವ ವ್ಯವಸ್ಥೆಯು ಇದೆ . ಪ್ರದರ್ಶನ ಬೆಳ್ಳಿಗೆ ೯ ಗಂಟೆಯಿಂದ ಸಂಜೆ ೭ ರ ತನಕ ನಡೆಯಲಿದೆ ಎಂದು ತಿಳಿಸಿದರು .
ಸುದ್ದಿಗೋಷ್ಠಿಯಲ್ಲಿ ಗ್ರಂಥಪಾಲಕಿ ಪ್ರಮೀಳಾ , ಪ್ರೊ. ಡೆನ್ಸಿಲ್ ಡಿಸೋಜ , ಉಪನ್ಯಾಸಕಿ ಮಮತಾ ಉಪಸ್ಥಿತತರಿದ್ದರು