ಕರಾವಳಿ ಕೆಂಪುಕಲ್ಲು ಸಮಸ್ಯೆಗೆ ಶಾಶ್ವತ ಪರಿಹಾರ ; ಸ್ಪೀಕ‌ರ್ ಯು.ಟಿ. ಖಾದರ್

ಮಂಗಳೂರು:ಇತ್ತೀಚಿಗೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಕೆಂಪು ಕಲ್ಲಿನ ಸಮಸ್ಯೆಗಳೆಲ್ಲವನ್ನೂ ಬಗೆಹರಿಸಲಾಗಿದೆ. ಇನ್ನು ಮುಂದೆ ಕೆಂಪು ಕಲ್ಲಿನ ದರ ಹಿಂದಿನ ದರಕ್ಕಿಂತ ಅಧಿಕವಾಗಲು ಸಾಧ್ಯವಿಲ್ಲ. ಸರ್ಕಾರಕ್ಕೆ ಸಲ್ಲಿಸಬೇಕಾದ ರಾಜಧನವನ್ನು ಕಡಿಮೆಗೊಳಿಸಲಾಗಿದ್ದು ಹಿಂದೆ ಇದ್ದ ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ. ಇನ್ನು ಮುಂದೆ ವ್ಯಾಪಾರಸ್ಥರು ಕೆಂಪು ಕಲ್ಲು ವ್ಯಾಪಾರವನ್ನು ಧೈರ್ಯದಿಂದ ಮಾಡಬಹುದು ಎಂದು ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಫರೀದ್ ತಿಳಿಸಿದರು .

ಅವರು ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊನ್ನೆಯ ಕ್ಯಾಬಿನೆಟ್‌ನಲ್ಲಿ ಅಧಿಕಾರಿಗಳು, ಶಾಸಕರು, ಕೆಂಪು ಕಲ್ಲಿನ ಮುಖ್ಯಸ್ಥರ ಜೊತೆಯಾಗಿ ಸಭೆ ಕರೆದು ಕೆಂಪುಕಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲಾಗಿದೆ . ಮೊದಲು ಪರ್ಮಿಟ್ ಇಲ್ಲದೆ ಕೆಂಪು ಕಲ್ಲು ತೆಗೆದು, ಯಾರ್ಯಾರಿಗೂ ಹಣ ಕೊಟ್ಟು ವ್ಯಾಪಾರ ಮಾಡೋಕಿತ್ತು ಆದರೆ ಇದೀಗ ಕಾನೂನು ಬದ್ಧವಾಗಿ, ಆತ್ಮವಿಶ್ವಾಸ, ಸ್ವಾಭಿಮಾನದಿಂದ ವ್ಯಾಪಾರ ಮಾಡಹುದು. ಇದಕ್ಕೆ ಮೊನ್ನೆ ಕ್ಯಾಬಿನೆಟ್ ಹಾಗೂ ಸಿಎಂ ಒಪ್ಪಿಗೆ ಸಿಕ್ಕಿದೆ. ಆರಂಭದಲ್ಲಿ 50 ಲೈಸೆನ್ಸ್‌ ಬಂದಿದ್ದು ಅದರಲ್ಲಿ 25 ಲೈಸೆನ್ಸ್‌ಗೆ ಪರ್ಮಿಟ್ ಮಾಡಿ ಕೊಡಲಾಗಿದೆ. ಬಾಕಿ ಇರುವ ಲೈಸೆನ್ಸ್‌ಗೆ ನೋಡಿಕೊಂಡು ಪರ್ಮಿಟ್ ಕೊಡ ಬೇಕೋ ಬೇಡವೋ ಎನ್ನುವ ನಿರ್ಧಾರವನ್ನು ಮಾಡಲಾಗುವುದೆಂದು ತಿಳಿಸಿದರು .

ಹಿಂದೆ ಕಲ್ಲು ಗಣಿಗಾರಿಕೆಗೆಗೆ ಸಾಕಷ್ಟು ಷರತ್ತುಗಳಿದ್ದವು. ಆ ಷರತ್ತುಗಳನ್ನು ನೋಡಿದರೆ ಕಲ್ಲು ತೆಗೆಯಲು ಸಾಧ್ಯವೇ ಇರುತ್ತಿರಲಿಲ್ಲ. ಹಿಂದೆ ರಾಜಧನ 280 ರೂ. ಇತ್ತು. ಈಗ ಅದನ್ನು 70ಕ್ಕೆ ಇಳಿಸಿದ್ದು, ಅದಕ್ಕೆ ರೂ.20 ಬಿಎಸ್‌ಟಿ ಸೇರಿ 90 ರೂ. ನಿಗದಿಪಡಿಸಲಾಗಿದೆ.

ಸಿಆರ್ಝಡ್ ಹಾಗೂ ನಾನ್ ಸಿಆರ್‌ಝಡ್ ಸಮಸ್ಯೆಗಳಿಂದಾಗಿ ಮರಳು ಎತ್ತಲು ಸಮಸ್ಯೆಗಳಿವೆ. ಇದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಬಗೆಹರಿಸಬೇಕಿದೆ. ಎಂಸ್ಯಾಂಡ್ ಇಂಡಸ್ಟ್ರಿ ಇಲ್ಲಿ ಸೆಟ್ ಆಗುವುದಿಲ್ಲ. ನಮ್ಮಲ್ಲಿ ಸಾಕಷ್ಟು ಸೀಝ್ ಅದರ ಮರಳು ಇದೆ. ಮೊದಲು ಅದನ್ನು ಸಾರ್ವಜನಿಕ ಕೆಲಸಗಳಿಗೆ ವಿತರಿಸಿ ಉಳಿದವನ್ನು ಗುತ್ತಿಗೆಯವರಿಗೆ ಕೊಡಲು ಚಿಂತನೆ ನಡೆದಿದೆ. ಗುತ್ತಿಗೆದಾರರು ಜಿಲ್ಲಾ ಡಿಡಿಯ ಒಪ್ಪಿಗೆ ಪಡೆದು ಮರಳು ವಿತರಣೆಗೆ ಮುಂದೆ ಬಂದಿದ್ದಾರೆ ಎಂದರು.

ರಸ್ತೆ ಅಭಿವೃದ್ಧಿಗೆ 90 ಕೋಟಿ ಹೆಚ್ಚುವರಿ ಅನುದಾನದ ಭಾಗ್ಯ

ಮಂಗಳೂರು ವಿಧಾನ ಸಭಾ ಕ್ಷೇತ್ರದ ರಸ್ತೆಯನ್ನು ಮಳೆ ನಿಂತ ತಕ್ಷಣ ಸುಸ್ಥಿತಿಗೆ ತರಲು ಅಧಿಕಾರಿಗಳಿಗೆ ಕಳೆದ ತಿಂಗಳು ಸೂಚಿಸಿದ್ದೆ. ಅವರು ಹದಗೆಟ್ಟ ರಸ್ತೆಗಳ ಅಭಿವ್ಯದ್ಧಿಗೆ ಅನುದಾನದ ವರದಿ ಸಲ್ಲಿಸಿದ್ದರು. ಇದೀಗ ಸುಮಾರು 90 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಎಲ್ಲ ರಸ್ತೆಗಳನ್ನೂ ಸುಸ್ಟಿಗೆ ತರುತ್ತೇವೆ ತೊಕ್ಕೊಟ್ಟು, ಮುಡಿವು, ಅಬ್ಬಕ್ಕ ಕೋಟೆಪುರ ಕೋಡಿ, ದೇರಳಕ್ಕಟ್ಟೆ, ಅಸೈಗೋಲಿ, ಮುಷ್ಕರ ಕಟ್ಟೆ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುವುದು ಖಾದರ್ ಹೇಳಿದರು.ಒಂದು ವೇಳೆ ಹೊಂಡ ಗುಂಡಿಯಿಂದ ಅನಾಹುತ ಸಂಭವಿಸಿದರೆ ಅದಕ್ಕೆ ಇಂಜಿನಿಯರ್‌ಗಳೇ ಜವಾಬ್ದಾರಿ. ಅಂತಹ ಸಂದರ್ಭದಲ್ಲಿ ಅವರನ್ನು ಕೆಲಸದಿಂದ ವಜಾ ಮಾಡಲಾಗುವುದು .

ರಾಜದಲ್ಲಿ ಸೆಪ್ಟೆಂಬರ್ 22ರಿಂದ ಜಾತಿ ಗಣತಿ

ಸೆಪ್ಟೆಂಬರ್ .22ರಿಂದ ರಾಜದಾದಂತ್ಯ ಜಾತಿ ಗಣತಿ ನಡೆಯಲಿದೆ , ಈ ಬಗ್ಗೆ ಸಾರ್ವಜನಿಕರು ಮೊದಲೇ ಸಿದ್ಧತೆ ನಡೆಸ ಬೇಕು. ಆಶಾ ಕಾರ್ಯಕರ್ತರಲ್ಲಿ ಒಂದು ಮಾದರಿ ಫಾರ್ಮ್ ಇದ್ದು, ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಭರ್ತಿ ಮಾಡಿಟ್ಟರೆ ಟೀಚರ್ಗಳು ಬಂದಾಗ ಸುಲಭವಾಗುತ್ತದೆ. ಸಮಯದ ಉಳಿತಾಯವೂ ಆಗಲಿದೆ ಎಂದು ಸಲಹೆ ನೀಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!