ಕಣ್ಣೂರಿನ ಎಟ್ಟಿಕುಳಂನಲ್ಲಿ ಸೆಪ್ಟೆಂಬರ್ 23 ರಿಂದ 25ರ ತನಕ ತಾಜುಲ್ ಉಲಮಾ 12ನೇ ಉರೂಸ್.

ಮಂಗಳೂರು: ಮದನಿ ದರ್ಗಾ ಶರೀಫನ್ನು ಕೇಂದ್ರೀಕರಿಸಿ ಕರ್ನಾಟಕದಲ್ಲಿ ಸುಮಾರು 70 ವರ್ಷಗಳ ಕಾಲ ಧಾರ್ಮಿಕ ನೇತೃತ್ವ ವಹಿಸಿದ, ಕನ್ನಡ ನಾಡಿನ ಸಹಸ್ರಾರು ಉಲಮಾಗಳ ಪ್ರೀತಿಯ ಗುರುವರ್ಯರೂ, ವಿದ್ವತ್ತು, ಆರಾಧನೆಗಳಲ್ಲಿ ಶತಮಾನ ಕಂಡ ಅತಿ ಶ್ರೇಷ್ಠರೂ ಆದ ಉಳ್ಳಾಲ ತಂಙಳ್, ಎಂದೇ ಖ್ಯಾತರಾಗಿದ್ದ ಶೈಖುನಾ ತಾಜುಲ್ ಉಲಮಾ ಸಯ್ಯದ್ ಅಬ್ದುರ್ರಹಮಾನ್ ಅಲ್ ಬುಖಾರಿ(ಖ.ಸಿ)ರವರ 12ನೇ ಉರೂಸ್ ಸಮಾರಂಭವು
ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕುಳಂನಲ್ಲಿ ಸೆಪ್ಟೆಂಬರ್ 23,24,25 ದಿನಾಂಕಗಳಲ್ಲಿ ನಡೆಯಲಿದೆ ಎಂದು ಮದನೀಸ್ ಕೇಂದ್ರ ಸಮಿತಿಯ ಕಾರ್ಯದರ್ಶಿಯಾದ ಬಶೀರ್ ಮದನಿ ಕೂಳೂರು ತಿಳಿಸಿದರು .

ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಈ ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರಾಂಡ್ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್, ಇ. ಸುಲೈಮಾನ್ ಉಸ್ತಾದ್, ಸಯ್ಯದ್ ಅಲೀ ಬಾಫಖಿ ತಂಙಳ್, ಕಡಲುಂಡಿ ಸಯ್ಯದ್ ಖಲೀಲ್ ತಂಙಳ್ ಸಹಿತ ಮುಂತಾದ ಧಾರ್ಮಿಕ ಗುರುಗಳು ಭಾಗವಹಿಸಲಿದ್ದಾರೆ ಜೊತೆಗೆ ಸ್ಪೀಕರ್ ಯು.ಟಿ. ಖಾದರ್, ಯೆನೆಪೋಯ ಅಬ್ದುಲ್ಲ ಕುಂಞ, ಇನಾಯತ್ ಅಲಿ ಸೇರಿ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ .

ಸೆಪ್ಟೆಂಬರ್ 25 ರಂದು ಬೆಳಿಗೆ, 10 ಗಂಟೆಗೆ ಮದನಿ ಸಂಗಮ ಹಾಗೂ ಸಂಜೆ 5:00 ಗಂಟೆಗೆ ಸಮಾರೋಪ ಸಮ್ಮೇಳನ ನಡೆಯಲಿದ್ದು, ಕೇರಳ-ಕರ್ನಾಟಕ-ತಮಿಳುನಾಡು ಮೊದಲಾದ ರಾಜ್ಯಗಳಿಂದ ಸಹಸ್ರಾರು ಮಂದಿ ಪಾಲ್ಗೊಳುವ ಸಾಧ್ಯತೆ ಇದೆ ಎಂದು ತಿಳಿಸಿದರುಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸ್ವಾಗತ ಸಮಿತಿ ಕೋಡಿನೇಟರಾದ ಖಾಲಿದ್ ಹಾಜಿ ಭಟ್ಕಳ , ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಮದನಿ ಬಂಡಾಡಿ , ಕಲಂದರ್ ಕಾವೂರು ಉಪಸ್ಥಿತತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!