ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಶಿಕ್ಷಣ ಕ್ರಾಂತಿಯನ್ನೇ ಮಾಡಿದೆ ; ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಹೇಳಿಕೆ.

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಾಕಷ್ಟು ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದೆ .ಸರಕಾರ , ಶಿಕ್ಷಣ ಇಲಾಖೆಯಲ್ಲಿಯೂ ಸಾಕಷ್ಟು ಬದಲಾವಣೆಗಳನ್ನು ತಂದಿದೆ . ೮೦ ಕ್ಕೂ ಅಧಿಕ ಶೇಕಡಾ ಕೆ ಪಿ ಎಸ್ ಮಾಡೆಲ್ ಶಾಲೆಗಳನ್ನು ಜಾರಿಗೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು .ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಮಕ್ಕಳಿಗೆ ಒಂದೇ ಸೂರಿನಡಿಗೆಯಲ್ಲಿ ಶಿಕ್ಷಣವನ್ನು ನೀಡಲು ಕೆ ಪಿ ಸ್ ಶಾಲೆಗಳು ಸಹಕಾರಿಯಾಗಿದೆ .ಈ ಬಾರಿ ಬಜೆಟ್ ನಲ್ಲಿ ೫೦೦ ಕೆ ಪಿ ಎಸ್ ಶಾಲೆಗಳನ್ನು ಘೋಷಣೆ ಮಾಡಲಾಗಿತ್ತು . ಆದರೆ ಇದೀಗ ೮೦೦ ಕೆ ಪಿ ಸ್ ಶಾಲೆಗಳನ್ನು ಕ್ಯಾಬಿನೆಟ್ ಅನುಮೋದನೆಯನ್ನು ನೀಡಿದ್ದು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಲಿದೆ . ಇದರಲ್ಲಿ ಹೆಚ್ಚಿನ ಮನ್ನಣೆಯನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿ ಆ ಭಾಗದಲ್ಲಿ ಅಕ್ಷರ ಜ್ಞಾನವನ್ನು ಪಸರಿಸಲಿದೆ ಎಂದರು .

ಶಾಲಾ ಮಟ್ಟದ ಪರೀಕ್ಷಾ ವಿಧಾನದಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದ ಮೇಲೆ ಪರೀಕ್ಷೆಯಲ್ಲಿ ನಡೆಯುತ್ತಿದ ಅಕ್ರಮಗಳನ್ನು ಹತೋಟಿಗೆ ತರಲಾಗಿದೆ . ಪರೀಕ್ಷೆಯಲ್ಲಿ ಸಾಕಷ್ಟು ಸುಧಾರಣೆಯನ್ನು ಇದು ಕಂಡಿದೆ ಎಂದರು .ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಅಂತಿಮ ಪರೀಕ್ಷೆಯನ್ನು ೩ ಬಾರಿ ಮಾಡುವ ಪದ್ದತಿಯನ್ನು ಜಾರಿಗೆ ತರಲಾಗಿದೆ . ಪಾಸ್ ಆಗದ ವಿದ್ಯಾರ್ಥಿಗಳು ದ್ವಿತೀಯ ಮತ್ತು ತೃತೀಯ ಬಾರಿ ಪರೀಕ್ಷೆಯನ್ನು ಬರೆಯುತ್ತಾರೆ .ಈ ಬಾರಿ ಈ ರೀತಿಯ ದ್ವಿತೀಯ ಮತ್ತು ತೃತೀಯ ಬಾರಿ ಪರೀಕ್ಷೆಯನ್ನು ಬರೆದು ಎಸ್ ಎಸ್ ಎಲ್ ಸಿ ಯಲ್ಲಿ 1 ಲಕ್ಷದ 16 ಸಾವಿರ ವಿದ್ಯಾರ್ಥಿಗಳು ಪಾಸ್ ಆಗಿದ್ದರೆ , ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ 52 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತೇರ್ಗಡೆಯನ್ನು ಹೊಂದಿದ್ದಾರೆ . ಇದು ವಿದ್ಯಾರ್ಥಿಗಳಿಗೆ ಮುಂದಿನ ಉನ್ನತ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗಿದೆ . ಈ ಭಾರಿ 13 ಸಾವಿರ ಸರಕಾರೀ ಶಾಲೆಗೆಗಳಿಗೆ ಹಾಗು 5500 ಅನುದಾನಿತ ಶಾಲೆಗಳಿಗೆ ಶಿಕ್ಷಕರನ್ನು ಸರಕಾರ ಮೂಲದಿಂದ ನೇಮಕಾತಿಯನ್ನು ಶೀಘ್ರವೇ ಮಾಡಲಾಗುವುದೆಂದು ತಿಳಿಸಿದರು .

ಕರ್ನಾಟಕ ಭಾಗದಲ್ಲಿ ನಡೆಯುವ ಸಮೀಕ್ಷೆಯ ಬಗ್ಗೆ ಮಾತನಾಡಿ , ಸಮೀಕ್ಷೆಗೆ ಈ ಭಾಗದ ಕೆಲವು ರಾಜಕೀಯ ನಾಯಕರು ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ . ಇದು ಖಂಡನೀಯವಾಗಿದೆ . ಈ ಸಮೀಕ್ಷೆಗೆ ಎಲ್ಲರೂ ಸಹಕರಿಸಬೇಕು .ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸಮೀಕ್ಷೆಯಿಂದ ಸಿಗುವ ಸರಿಯಾದ ದತ್ತಾಂಶವು ತೆರಿಗೆಯ ಸಮರ್ಪಕ ಹಂಚಿಕೆಗೆ ಸಹಕಾರಿ ಆಗಲಿದೆ . ದಸರಾ ಸಂದರ್ಭದಲ್ಲಿ ಶಿಕ್ಷಕರಿಗೆ ರಜೆ ಇರುವುದರಿಂದ ಅವರನ್ನು ಸಮೀಕ್ಷೆಗೆ ಆಯ್ಕೆ ಮಾಡಲಾಗಿದೆ . ರಜೆ ಇಲ್ಲದ ಉಳಿದ ಸಂದರ್ಭದಲ್ಲಿ ಸಮೀಕ್ಷೆಗೆ ಅವರನ್ನು ಹಾಜರು ಪಡಿಸಿದ್ದರೆ ವಿದ್ಯಾರ್ಥಿಗಳ ಪಾಠಕ್ಕೆ ಅಡ್ಡಿ ಉಂಟಾಗುತ್ತಿತ್ತು . ಶಾಲೆಯ ಪುನರಾರಂಭದ ಬಗ್ಗೆ ಗೊಂದಲಿದ್ದವು ಆದರೆ ಸರಕಾರ ನಿಗದಿ ಪಡಿಸಿದ ದಿನಾಂಕದಂತೆ ಶಾಲೆ ಆರಂಭವಾಗಲಿದೆ ಎಂದು ವಿದ್ಯಾರ್ಥಿ ವಲಯಗಳಲ್ಲಿ ತಲೆ ತೋರಿದ್ದ ಅನುಮಾನವನ್ನು ದೂರ ಮಾಡಿದರು .

ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ರಾಜ್ಯ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ವಿಸ್ವಾಶ್ ಕುಮಾರ್ ದಾಸ್, ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಮುಖಂಡರಾದ ಪದ್ಮರಾಜ್.ಆರ್ ಪೂಜಾರಿ, ನೀರಜ್ ಚಂದ್ರಪಾಲ್, ಪದ್ಮನಾಭ ಕೋಟ್ಯಾನ್, ಟಿ.ಕೆ.ಸುಧೀರ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!