ಮಸ್ಕತ್‌ನಲ್ಲಿ ಅ.10ರಂದು ‘ಪೆಪೆರೆ ಪೆಪೆ ಢುಂ’! ಬ್ರಾಸ್ ಬ್ಯಾಂಡ್ ಸ್ಪರ್ಧೆ.

ಮಂಗಳೂರು: ಕರಾವಳಿಯ ಕೊಂಕಣಿ ಸಂಗೀತ ಲೋಕದಲ್ಲಿ ಬ್ರಾಸ್ ಬ್ಯಾಂಡ್ ಕಲೆ ಪ್ರಚಾರ ಮತ್ತು ಉತ್ತೇಜನಕ್ಕಾಗಿ ‘ಆಮಿ ಆನಿ ಆಮ್ಮಿಂ’ ಸಂಸ್ಥೆಯು ಆಯೋಜಿಸಿರುವ ‘ಪೆಪೆರೆ ಪೆಪ್ ಢುಂ’ ಸ್ಪರ್ಧೆಯ ಎರಡನೇ ಆವೃತ್ತಿ ಅಕ್ಟೋಬರ್ 10 ರಂದು ಒಮಾನ್ ರಾಜಧಾನಿ ಮಸ್ಕತ್‌ ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡೆನಿಸ್ ಡಿಸಿಲ್ವಾ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು , ಮಸ್ಕತ್‌ ನ ರುವಿಯ ಅಲ್ ಫಲಾಜ್ ಹೋಟೆಲ್‌ನಲ್ಲಿ ನಡೆಯುವ ಈ ಸಂಗೀತ ಮೇಳವನ್ನು ಎಂಸಿಸಿಪಿ ಅಧ್ಯಕ್ಷ ಲ್ಯಾನ್ಸಿ ಲೋಬೊ, ‘ಆಮಿ ಆನಿ ಆಮ್ಮಿಂ’ ತಂಡ ಹಾಗೂ ವೆಂಚರ್ ಎಂಟರ್‌ಟೇನ್‌ಮೆಂಟ್ ತಂಡ ಮುನ್ನಡೆಸಲಿದೆ. ‘ಮಸ್ಕತ್ ಚಿಂ ನಕ್ತಿರಾಂ’, ‘ದಬಕ್ ದಬಾ ಕಲಾಕಾರ್’, ‘ಗಾಂಂ ಮೋತಿಯಾಂ’ ಮತ್ತು ‘ತನ್ನಾಂಂ ತಾಲೆಂತಾಂ’ ಎಂಬ ನಾಲ್ಕು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಕೊಂಕಣಿ ಹಾಡುಗಳು, ಬಾಯಾ ನೃತ್ಯ, ವಾಲ್ಟ್, ಜೈವ್ ಹಾಗೂ ಹುಲಿ ನೃತ್ಯ ಮುಂತಾದ ವಿಭಾಗಗಳಲ್ಲಿ ಪ್ರತಿಭೆ ಪ್ರದರ್ಶಿಸಲಿವೆ ಎಂದರು.

ವಿಜೇತ ತಂಡಕ್ಕೆ 1,000 ಒಮಾನಿ ರಿಯಲ್ (ಸುಮಾರು ₹2.3 ಲಕ್ಷ) ಹಾಗೂ ಉಳಿದ ಮೂವರು ತಂಡಗಳಿಗೆ ತಲಾ 500 ಒಮಾನಿ ರಿಯಲ್ (ಸುಮಾರು ₹1.15 ಲಕ್ಷ) ಬಹುಮಾನ ನೀಡಲಾಗುವುದು. ಬಸ್ಮಾರ್‌ನ ಅರುಣ್ ಸೆರಾವೊ ನೇತೃತ್ವದ ಹತ್ತು ಮಂದಿಯ ಬ್ರಾಸ್ ಬ್ಯಾಂಡ್ ವಾದಕರ ತಂಡವು ಸ್ಪರ್ಧೆಗೆ ಸಂಗೀತ ಒದಗಿಸಲಿದೆ. ಕಾರ್ಯಕ್ರಮದ ಕಾರ್ಯನಿರ್ವಹಣೆಯನ್ನು ಸಂತೋಷ್ ಡಿಕೋಸ್ತಾ, ರೀನ ಕ್ಯಾಸ್ಟಲಿನೊ ಹಾಗೂ ಅರುಣ್ ಡಿಸೋಜಾ ವಹಿಸಿಕೊಂಡಿದ್ದಾರೆ ಎಂದರು.

ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ ಮುಖ್ಯ ಅತಿಥಿಯಾಗಿದ್ದು, ವಂ. ಸ್ಟೀಫನ್ ಲುವಿಸ್, ವಂ. ಸಿಲ್ವೆಸ್ಟರ್ ಡಿಕೊಸ್ಮಾ, ಯುಟಿ ಇಫ್ತಿಕರ್ ಫರೀದ್, ಸೇರಿ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದರು .ಸುದ್ದಿಗೋಷ್ಠಿಯಲ್ಲಿ ‘ಆಮಿ ಆನಿ ಆಮ್ಮಿಂ’ ಸಂಸ್ಥೆಯ ಕಾರ್ಯದರ್ಶಿಗಳಾದ ಸಂತೋಷ್ ಡಿಕೊಸ್ತಾ, ಸದಸ್ಯರಾದ ಲೊಯ್ಡ್ ರೇಗೊ, ಮೆಲ್ವಿನ್ ಡೆಸಾ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!