ಅ. 11 ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಜನ್ಮದಿನಾಚರಣೆ

ಮಂಗಳೂರು ನಗರದ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಆವರಣದಲ್ಲಿ ಅಕ್ಟೋಬರ್ 11 ರಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ 72 ನೆಯ “ಅಮೃತೋತ್ಸವ 2025” ನ್ನು ಶದ್ಧಾ ಭಕ್ತಿಯಿಂದ ವೈವಿಧಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದೆಂದು ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಅಮೀನ್ ತಿಳಿಸಿದರು .ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದರು.

ಅಂದು ಪೂರ್ವಾಹ್ನ 11.45 ಕೆ.ಸಾಮಿನಿ ಮಂಗಳಾಮೃತ ಪ್ರಾಣ ರವರು ಅಮೃತ ಜ್ಯೋತಿಯನ್ನು ಬೆಳಗಿಸುವ ಮೂಲಕ ಚಾಲನೆ ನೀಡಲಿರುವರು. ಬೆಳಗ್ಗೆ 9.00 ರಿಂದ 11.00 ಗಂಟೆಯ ತನಕ ಶ್ರೀ ಗುರು ಪಾದುಕಾ ಪೂಜೆ ಹಾಗು ಇತರ ಪೂಜಾದಿ ಕಾರ್ಯಗಳು ನಡೆಯಲಿದೆ . ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಭಾಧಕ್ಷರಾದ ಯು ಟಿ ಖಾದರ್ ಫರೀದ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ . ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ನೆರವೇರಿಸಲಿರುವರು. ಅಧ್ಯಕ್ಷತೆಯನ್ನು ಶಾಸಕರಾದ ವೇದವ್ಯಾಸ್ ಕಾಮತ್ ವಹಿಸಲಿದ್ದಾರೆ . ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ ಸೋಜ ಮತ್ತು ಅಮೃತ ವಿಶ್ವವಿದ್ಯಾ ಪೀಠಂ ಕೊಚ್ಚಿ ಇದರ ಡೀನ್ ಮತ್ತು ಡೈರೆಕ್ಟರ್ ಆದ ಡಾ.ಯು.ಕೃಷ್ಣಕುಮಾರ್ ಭಾಗವಹಿಸಲಿರುವರು.

ಅಮ್ಮನವರ ಮಾನವೀಯ ಸೇವಾ ಉಪಕ್ರಮದಂತೆ ಹದಿನೆಂಟು ವರ್ಷದೊಳಗಿನ ಜನಜಾತ ಹೃದಯ ರೋಗದಿಂದ ಸಂಕಷ್ಟಕಕ್ಕೆ , ಸಿಲುಕಿರುವ ರಾಜದ ಹಲವಾರು ಜಿಲೆಗಳ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಹೃದಯ ಶಸ್ತ್ರಚಿಕಿತ್ಸೆ ಸಂಪೂರ್ಣ ಉಚಿತವಾಗಿ ಮಾಡಲಾಗಿದೆ.ಅಮನವರ ಈ ಶೇಷ್ಠ ಸೇವೆಯ ಅನುಸಾರ 200 ಮಕ್ಕಳು ಶಸ್ತ್ರ ಚಿಕಿತ್ಸೆ ಸಹಿತ ಉನ್ನತ ಚಿಕಿತ್ಸೆಗೆ ಆಯ್ಕೆಯಾಗಿ 100 ಮಕಳು ಈಗಾಗಲೇ ಈ ಸೇವೆಯ ಪ್ರಯೋಜನ ಪಡೆದಿರುತ್ತಾರೆ , ಅಮೃತೋತ್ಸವ ಅಂಗವಾಗಿ ವಿಶೇಷ ಶ್ರೀ ಚಕ್ರ ಪೂಜೆ ನೆರವೇರಲಿದೆ ಎಂದರು .

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ಡಾ ವಸಂತ ಕುಮಾರ್ ಪೆರ್ಲ , ರಮಾನಾಥ್ ನಾಯಕ್ , ಡಾ ದೇವದಾಸ್ ಪುತ್ರನ್ ಉಪಸ್ಥಿತತಿರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!