ಹನಿಟ್ರ್ಯಾಪ್ ಗೆ ಯುವಕನೋರ್ವ ಬಲಿ .

ಮಂಗಳೂರು: ಹನಿಟ್ರ್ಯಾಪ್ ಗೆ ಯುವಕನೋರ್ವ ಬಲಿಯಾಗಿದ್ದಾನೆ. ವಿಡಿಯೋ ಮಾಡಿ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ನಾಲ್ವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೋಟ್ ನಲ್ಲಿ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ಯುವಕನನ್ನು ನಿಟ್ಟೆ ಪರಪಾಡಿ ನಿವಾಸಿ ಅಬಿಷೇಕ್ ಎಂದು ಗುರುತಿಸಲಾಗಿದೆ. ಈತ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಬಯೋಮೆಡಿಕಲ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದನು .ಈತ ಆತ್ಮಹತ್ಯೆ ಗೈಯ್ಯುವ ಮೊದಲು ಡೀಟೆಲ್ ಆಗಿ ಯಾರೆಲ್ಲ ಕಿರುಕುಳ ನೀಡಿದ್ದಾರೆಂದು ಮತ್ತು ಯಾವ ವಿಚಾರಕ್ಕೆಂದು ನೋಟ್ ನಲ್ಲಿ ಬರೆದು ಆತ್ಮಹತ್ಯೆ ಮಾಡಿದ್ದಾನೆ.

ನಿರೀಕ್ಷಾ,ರಾಹುಲ್,ರಾಕೇಶ ಹಾಗೂ ತಸ್ಲಿಂ ಎಂಬವರ ಹೆಸರನ್ನು ಬರೆದಿದ್ದು ಈ ಮೇಲಿನವರು ಹಾಗೂ ಇನ್ನಿತರರು ಸೇರಿ ಹಣಕ್ಕಾಗಿ ತುಂಬಾ ಕಿರುಕುಳ ಮಾಡುತ್ತಿದ್ದು ನೆಮ್ಮದಿಯಿಂದ ಬದುಕಲು ಬಿಡುವುದಿಲ್ಲ. ಮಾನಸಿಕವಾಗಿ ದೈಹಿಕವಾಗಿ ತುಂಬಾ ಹಿಂಸೆ ನೀಡಿದ್ದಾರೆ,ಕೊಲೆ ಮಾಡಿ ರೋಡ್ ನಲ್ಲಿ ಎಸೆಯುತ್ತೆನೆಂದು ಬೆದರಿಕೆ ಹಾಕಿದ್ದಾರೆಂದು ಡೆತ್ ನೋಟಿನಲ್ಲಿ ಬರೆದಿದ್ದಾನೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!