ಅರಣ್ಯ ಇಲಾಖೆಯ ಮಂಗಳೂರಿನ ಅರಣ್ಯಾಧಿಕಾರಿ ಜಿತೇಶ್ .ಪಿ ಅವರಿಗೆ ಮುಖ್ಯಮಂತ್ರಿ ಪದಕ..

ಬಂಟ್ವಾಳ : ಅರಣ್ಯ ಇಲಾಖೆಯ ಬಂಟ್ವಾಳ ವಲಯದ ಗಸ್ತುಪಾಲಕ ಜಿತೇಶ್.ಪಿ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ. ಕರ್ನಾಟಕ ಸರಕಾರದಿಂದ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನೀಡುವ ಮುಖ್ಯಮಂತ್ರಿ ಪದಕವನ್ನು ಮಂಗಳೂರು ವಿಭಾಗದ ಬಂಟ್ವಾಳ ವಲಯದ ಗಸ್ತುಪಾಲಕ ಜಿತೇಶ್.ಪಿ ಅವರು ಅಕ್ರಮ ಮರ ಕಡಿಯುವುದು ಮತ್ತು ಕಳ್ಳ ಸಾಗಾಣಿಕೆ ತಡೆಗಟ್ಟುವಿಕೆಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಅ.08ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕೆಟ್ ಹಾಲ್ ನಲ್ಲಿ ಸ್ವೀಕರಿಸಿದರು.

ಬಂಟ್ವಾಳ ವಲಯದ ಗಸ್ತುಪಾಲಕ ಜಿತೇಶ್.ಪಿ ಅವರು ಮಂಗಳೂರಿನ ಕುಳಾಯಿ ಚಿತ್ರಾಪುರದ ನಿವಾಸಿಯಾದ ಯಾಧವ ಪುತ್ರನ್ ಹಾಗೂ ಸೇವಂತಿ ಕಾಂಚನ ಅವರ ಪುತ್ರ. ಇವರ ತಂದೆ ಯಾಧವ ಪುತ್ರನ್ ಅವರು NMPT ಉದ್ಯೋಗದಿಂದ ನಿವೃತ್ತರಾಗಿದ್ದಾರೆ.

ಜಿತೇಶ್.ಪಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು NMPT ಸ್ಕೂಲ್ ನಲ್ಲಿ ಪೂರ್ಣಗೊಳಿಸಿದರು. ಸುಮಾರು 20 ವರ್ಷಗಳ ಕಾಲ ಪಂಜ ಮಂಗಳೂರು, ಬಂಟ್ವಾಳ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಬಂಟ್ವಾಳ ವಲಯದಲ್ಲಿ ಗಸ್ತು ಪಾಲಕನಾಗಿ ಕರ್ತವ್ಯ ನಿರ್ವಹಿಸುವುದರೊಂದಿಗೆ ಬಂಟ್ವಾಳ ಸರಕಾರಿ ನೌಕರರ ಸಂಘದ ನಾಮ ನಿರ್ದೇಶಿತ ಸದಸ್ಯನಾಗಿ ಸಂಘದಲ್ಲಿ ಕ್ರೀಡಾ ಕಾರ್ಯದರ್ಶಿ ಆಗಿಯೂ ಹಾಗೂ ಮಂಗಳೂರು ವಿಭಾಗದ ಗಸ್ತು ಪಾಲಕ ಹಾಗೂ ಅರಣ್ಯ ವೀಕ್ಷಕರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೀಗ ಇವರ ಅರಣ್ಯ ಇಲಾಖೆಯಲ್ಲಿನ ದಕ್ಷ ,ನಿಷ್ಠೆ ಹಾಗೂ ಪ್ರಾಮಾಣಿಕತೆಯ ಕೆಲಸವನ್ನು ಪರಿಗಣಿಸಿ ಘನ ಸರಕಾರವು ಅಕ್ರಮವಾಗಿ ಮರ ಕಡಿಯುವುದು ಮತ್ತು ಕಳ್ಳ ಸಾಗಾಣಿಕೆ ತಡೆಗಟ್ಟುವ ಸಾಧನೆಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪದಕವನ್ನು ಪಡೆದುಕೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!