ಮಂಗಳೂರು ನಗರದ ಬಜಿಲಕೇರಿಯ ಮುಖ್ಯಪ್ರಾಣ ದೇವಸ್ಥಾನದ ಗೋವುಗಳಿಗೆ ಗೋ ಪೂಜೆ

ಮಂಗಳೂರು: ಮಂಗಳೂರು ನಗರದ ಬಜಿಲಕೇರಿಯ ಮುಖ್ಯಪ್ರಾಣ ದೇವಸ್ಥಾನದ ವಠಾರದಲ್ಲಿರುವ ಶ್ರೀಯುತ ಗುರುರಾಜ್ ಭಟ್ ರವರ ಮಾಲೀಕತ್ವದ ಗೋ – ಶಾಲೆಯಲ್ಲಿ ಸಾಮರಸ್ಯ ಮಂಗಳೂರು ವತಿಯಿಂದ 33 ಕೋಟಿ ದೇವತೆಗಳ ಅವಾಸಸ್ಥಾನವಾಗಿರುವ ಗೋ- ಮಾತೆಯ ಪೂಜೆಯನ್ನು ಆಚರಿಸಲಾಯಿತು.

ಹಿಂದೂ ಧರ್ಮದಲ್ಲಿ ಹಸುವಿಗೆ ವಿಶೇಷ ಸ್ಥಾನ, ಮಾನ, ಗೌರವವಿದೆ. ಹಸುವನ್ನು ಪೂಜನೀಯ ಭಾವನೆಯಿಂದ ಕಾಣಲಾಗುತ್ತದೆ. ಅಷ್ಟು ಮಾತ್ರವಲ್ಲ ಹಿಂದೂ ಧರ್ಮಗ್ರಂಥಗಳಲ್ಲಿ ಹಸುವಿಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ. ಹಸುವಿನಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿದ್ದಾರೆಂದು ನಂಬಲಾಗುತ್ತದೆ – ಸಾಮರಸ್ಯ ಮಂಗಳೂರು ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯಕ್ .ಈ ಸಂಧರ್ಭದಲ್ಲಿ ವೇಧಿಕೆಯ ಪ್ರಮುಖರಾದ ಯೋಗೀಶ್ ನಾಯಕ್ , ಸಮರ್ಥ್ ,ಭಟ್ , ಸಿತಾರಾ , ರಾಧಿಕಾ ನಾಯಕ್ , ನೀತ್ ಶರಣ್ , ರಾಜೇಶ್ ದೇವಾಡಿಗ , ಸುನಿತಾ , ಟಿಸಿ ಗಣೇಶ್ , ಪ್ರಫುಲ್ಲಾ ಕಾಮತ್ , ಸುನಂದಾ , ಮಾತಾಜಿ , ರತಿಕಾ ,ರಚಿತಾ ಹಾಗೂ ಮಾತಾಜಿಯರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!