ಕಳೆದ ನಾಲ್ಕು ದಿನಗಳಲ್ಲಾಗಿ ನಡೆದ ಉತ್ಸವ ಭಾನುವಾರದಂದು ಕಡೆ ಬಂಡಿ ಉತ್ಸವದೊಂದಿಗೆ ಸಮಾಪ್ತಿಗೊಂಡಿತು. ಈ ಸಲ ಮಳೆ ಸುರಿಯದ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಭಾರೀ ಜನಸ್ತೋಮವೇ ಕಂಡು ಬಂತು.
ಧ್ವಜರೋಹಣದ ಮರುದಿವಸ ನಡೆದ ಯಕ್ಷಗಾನ ತಾಳಮದ್ದಳೆ, ಸಂಗೀತ ರಸಮಂಜರಿ ಬಳಿಕ ಕೊಟ್ಯದಾಯನ ಅಣ್ಣ ದೈವದ ನೇಮ, ಕೆರೆ ದೀಪಾರಾಧನೆ ವೀಕ್ಷಿಸಲು ಉಭಯ ರಾಜ್ಯಗಳ ನಾನಾ ಕಡೆಗಳಿಂದ ಭಕ್ತರ ಸಾಗರವೇ ಹರಿದು ಬಂದಿತ್ತು.
ಅದೇ ರೀತಿ ತಮ್ಮ ದೈವದ ನೇಮ, ಮಡಸ್ಥಾನ, ಮುಂಡತ್ತಾಯ ದೈವದ ನೇಮ, ನಡುಬಂಡಿ ಉತ್ಸವ, ಅಣ್ಣ ದೈವದ ನೇಮ, ತಮ್ಮ ದೈವದ ನೇಮ, ಮುಂಡತ್ತಾಯ ದೈವದ ನೇಮ ಸೇರಿದಂತೆ ಕಡೆಬಂಡಿ ಉತ್ಸವದ ತನಕ ಪ್ರತಿಯೊಂದು ಕಾರ್ಯಕ್ರಮ ಕೂಡಾ ಬಹಳ ಅದ್ದೂರಿಯಿಂದ ನಡೆಯಿತು.
ಉತ್ಸವಕ್ಕೆ ಆಗಮಿಸುವ ವಾಹನಗಳನ್ನು ಹಾಗೂ ಭಕ್ತಾಭಿಮಾನಿಗಳನ್ನು ನಿಯಂತ್ರಿಸಲು ಸ್ವಯಂ ಸೇವಕರ ಸೇವೆ ಶ್ಲಾಘನೀಯವಾಗಿತ್ತು. ಉತ್ಸವದ ಕೊನೆಯ ದಿನದಂದು ಮಂಜೇಶ್ವರ ಕ್ಷೇತ್ರದ ಆಹ್ವಾನ ಮೇರೆಗೆ ಸಾವಿರ ಜಮಾಅತ್ ಮಸೀದಿ ಯ ಪ್ರತಿನಿದಿಗಳು ತೆರಳಿ ಬಾವೈಕ್ಯತೆಯ ಸಂದೇಶ ನೀಡಿದ ದೃಶ್ಯ ಕೂಡಾ ಕಂಡು ಬಂತು.
ಕೊನೆಯಲ್ಲಿ ಸುಡು ಮದ್ದು ಪ್ರದರ್ಶನ ನಡೆಯಿತು. ಬುಧವಾರ ರಾತ್ರಿ ಧ್ವಜಾವರೋಹಣ ನಡೆಯಲಿದೆ.