ಮಂಗಳೂರು: ಭಾರತೀಯ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಶನ್ ಲಿಮಿಟೆಡ್ (ಐಆರ್‌ಸಿಟಿಸಿ) ಭಾರತ ಸರ್ಕಾರದ ನವರತ್ನ ಸಂಸ್ಥೆಯು ದಕ್ಷಿಣ ವಲಯದ ಮಂಗಳೂರು ಕಚೇರಿಯಿಂದ ಯಾತ್ರಿಕರ ಅನುಕೂಲಕ್ಕಾಗಿ ಹಲವು ವಿಶಿಷ್ಟ ಪ್ರವಾಸ ಪ್ಯಾಕೇಜುಗಳನ್ನು ಪ್ರಕಟಿಸಿದೆ ಎಂದು ಸಂಸ್ಥೆಯ ಜಂಟಿ ಜನರಲ್ ಮ್ಯಾನೇಜರ್ ಸ್ಯಾಮ್ ಜೋಸೆಫ್ ಪಿ ಮಾಹಿತಿಯನ್ನು ನೀಡಿದರು .
ಅವರು ಪತ್ರಿಕಾ ಭವನದಲ್ಲಿ ನಡೆಸಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಈ ಪ್ಯಾಕೇಜುಗಳಲ್ಲಿ ಕಾಶಿ, ಪ್ರಯಾಗರಾಜ್, ಅಯೋಧ್ಯಾ ವಿಮಾನ ಪ್ಯಾಕೇಜ್, ಉತ್ತರ ಭಾರತ ರೈಲು ಟೂರ್ ಪ್ಯಾಕೇಜ್, ಮತ್ತು ದಕ್ಷಿಣ ಭಾರತ ದೇವಾಲಯ ಪ್ಯಾಕೇಜ್ ಸೇರಿದಂತೆ ತೀರ್ಥಯಾತ್ರೆ ಹಾಗೂ ಪ್ರವಾಸಿಗರಿಗೆ ಅನುಕೂಲಕರ ಯೋಜನೆಗಳು ಸೇರಿವೆ ಎಂದರು.
ಐಆರ್‌ಸಿಟಿಸಿ ಪ್ರಕಟಣೆಯ ಪ್ರಕಾರ, ಕಾಶಿ/ಪ್ರಯಾಗರಾಜ್/ಅಯೋಧ್ಯಾ ವಿಮಾನ ಪ್ಯಾಕೇಜ್ – 5 ದಿನ/4 ರಾತ್ರಿ ಅವಧಿಯ ಪ್ರವಾಸವಾಗಿದ್ದು, ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡಲಿದೆ. ಪ್ರತಿ ಪ್ರಯಾಣಿಕನಿಗೂ ರೂ. 35,600/- ರಿಂದ ಶುಲ್ಕ ನಿಗದಿಯಾಗಿದೆ.ಉತ್ತರ ಭಾರತ ರೈಲು ಟೂರ್ ಪ್ಯಾಕೇಜ್ – ವಾರಾಣಸಿ, ಗಯಾ, ಪ್ರಯಾಗರಾಜ್, ಅಯೋಧ್ಯಾ ಹರ್ಷಿದಾರ, ಮಥುರಾ, ಆಗ್ರಾ ಮುಂತಾದ ಪವಿತ್ರ ಸ್ಥಳಗಳನ್ನು ಒಳಗೊಂಡಿದೆ. AC ವರ್ಗದ ಪ್ರಯಾಣಿಕರಿಗೆ ರೂ. 11,430/-, ಸ್ವೀಪರ್ ವರ್ಗದ ಪ್ರಯಾಣಿಕರಿಗೆ ರೂ. 10,160/- ರಿಂದ ಶುಲ್ಕ ನಿಗದಿಯಾಗಿದೆ.
ಈ ಎಲ್ಲಾ ಪ್ಯಾಕೇಜುಗಳಲ್ಲಿ ಪ್ರಯಾಣ, ವಸತಿ, ಆಹಾರ ಮತ್ತು ಸ್ಥಳೀಯ ಸಂಚಾರ ಸೌಲಭ್ಯಗಳನ್ನು ಒಳಗೊಂಡಿದೆ. ಯಾತ್ರಿಕರಿಗೆ ಸುರಕ್ಷಿತ ಹಾಗೂ ಆರ್ಥಿಕ ಪ್ರಯಾಣದ ಅನುಭವ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಐಆರ್‌ಸಿಟಿಸಿ ಯ ಸದಸ್ಯರಾದ ವಿನೋದ್ ರಾಜ್ ಉಪಸ್ಥಿತತರಿದ್ದರು .