ಮಂಗಳೂರು: ಸಹ್ಯಾದ್ರಿ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್ಮೆಂಟ್ ಕಾಲೇಜು, ಮಂಗಳೂರು, “ಶೈನ್ ಫೌಂಡೇಶನ್” ಸಹಯೋಗದೊಂದಿಗೆ “ಸಿನರ್ಜಿಯಾ 2025” ಎಂಬ ರಾಷ್ಟ್ರೀಯ ಮಟ್ಟದ ಸೃಜನಾತ್ಮಕ ನವೋದ್ಯಮ ಮೇಳವು ನವೆಂಬರ್ 6ರಿಂದ 8ರವರೆಗೆ ನಡೆಯಲಿದ್ದು , ಈ ಕಾರ್ಯಕ್ರಮವು ವಿಜ್ಞಾನ, ತಂತ್ರಜ್ಞಾನ ಹಾಗೂ ಸೃಜನಶೀಲತೆಯ ಸಂಯೋಜನೆಯ ಮೂಲಕ ಸಾಮಾಜಿಕ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವ ವೇದಿಕೆಯಾಗಿ ಪರಿವರ್ತನೆಗೊಳ್ಳಲಿದೆ ಎಂದು ಸಹ್ಯಾದ್ರಿ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜಗನೇರಿ ತಿಳಿಸಿದರು .
ಅವರು ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ದೇಶದಾದ್ಯಂತ 425ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳಿಂದ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮವು ನವೋದ್ಯಮ, ಸಂಶೋಧನೆ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ನವೆಂಬರ್ 6 ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು ಇದರಲ್ಲಿ ಮುಖ್ಯ ಅಥಿತಿಯಾಗಿ ಇ ಜಿ ಡಿ ಕೆ ಯ ಚೀಫ್ ಟೆಕ್ನಾಲಜಿ ಆಫೀಸರ್ ರಾದ ಅಲ್ಲನ್ ಬೆಚ್ ಹಾಗೂ ಇ ಜಿ ಡಿ ಕೆ ಯ ಹೆಡ್ ಆಫ್ ಹುಮಾನ್ ರಿಸೋರ್ಸ್ ಟೀನಾ ಬೋದಿನ್ ಭಾಗವಹಿಸಲಿದ್ದಾರೆ . ನವೆಂಬರ್ 8 ರಂದು ಗ್ರಾಂಡ್ ಫಿನಾಲೆ ಮತ್ತು ಪ್ರಶಸ್ತಿ ವಿತರಣೆಯು , ಸನ್ಮಾನ ಕಾರ್ಯಕ್ರಮವು ನಡೆಯಲಿದೆ ಎಂದರು .
ಅವರು ಸಿನರ್ಜಿಯಾ 2025 ರ ಪ್ರಮುಖ ವಿಭಾಗಗಳಲ್ಲಿ ಒಂದಾದ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ ಕಾರ್ಯಕ್ರಮದ ಬಗ್ಗೆ ತಿಳಿಸುತ್ತಾ , ಶಾಲಾ ಹಾಗೂ ಪಿಯು ವಿದ್ಯಾರ್ಥಿಗಳಿಗೆ ನವೀನ ಆಲೋಚನೆಗಳನ್ನು ಪ್ರದರ್ಶಿಸಲು ವೇದಿಕೆ ಇದಾಗಿದೆ . ಆಯ್ಕೆಯಾದ ತಂಡಗಳಿಗೆ 2 ಲಕ್ಷ ಮೊತ್ತದ Seed Grant ಹಾಗೂ Proof of Concept ಅಭಿವೃದ್ಧಿಗೆ ಸಹಾಯ ದೊರೆಯಲಿದೆ ಎಂದರು .
ಡೆವ್ಹೋಸ್ಟ್ -ರಾಷ್ಟ್ರೀಯ ಹ್ಯಾಕಥಾನ್ ಬಗ್ಗೆ ವಿವರಿಸುತ್ತಾ , ಈ ಕಾರ್ಯಕ್ರಮದಲ್ಲಿ EG ಪ್ರಾಯೋಜಿತ 8ನೇ ಆವೃತ್ತಿಯ ಡೆವ್ಹೋಸ್ಟ್ ಎಂಬ ಪ್ರಮುಖ ತಾಂತ್ರಿಕ ಕಾರ್ಯಕ್ರಮವೂ ಒಳಗೊಂಡಿದೆ. ಇದು ಸಹ್ಯಾದ್ರಿ ಓಪನ್ ಸೋರ್ಸ್ ಕಮ್ಯೂನಿಟಿ (SOSC) ಆಯೋಜಿಸುವ 36 ಗಂಟೆಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಆಗಿದೆ. ಈ ವಿಭಾಗದಲ್ಲಿ ಉದ್ಯಮ ತಜ್ಞರಿಂದ ಡೆವಲಪರ್ ಟಾಕ್ಸ್, ಮಾಸ್ಟರ್ಕ್ಲಾಸ್ಗಳು ಮತ್ತು ವರ್ಕ್ ಶಾಪ್ಗಳು ನಡೆಯಲಿದ್ದು, ಜೊತೆಗೆ ರೋಚಕ ತಾಂತ್ರಿಕ ಸ್ಪರ್ಧೆಗಳೂ ಆಯೋಜಿಸಲಾಗಿದೆ ಎಂದರು
ಇದರ ಜೊತೆಗೆ ಏರೋಫಿಲಿಯಾ – ತಾಂತ್ರಿಕ ಮತ್ತು ಸಾಂಸ್ಕೃತಿಕ ಮೇಳ , ಸುಮೋ ಫೈಟ್ ಹಾಗೂ ಸ್ವಯಂ ಚಾಲಿತ ರೋಬೋ ಸ್ಪರ್ಧೆ ಇರಲಿದ್ದು ಇದು ವಿದ್ಯಾರ್ಥಿಗಳಿಗೆ , ಶಿಕ್ಷಕರಿಗೆ , ಉದ್ಯಮ ಶೀಲರಿಗೆ ಹೊಸ ಅವಕಾಶವನ್ನೇ ಹೊತ್ತು ತರಲಿದೆ ಎಂದರು . ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಉಪಸನ್ಯಾಸಕರಾದ ಡಾ ಸುಧೀರ್ ಶೆಟ್ಟಿ , ಡಾ ಶಮಂತ್ ರೈ , ಡಾ ಪ್ರಶಾಂತ್ ರಾವ್ ಸಹಿತ ಮುಂತಾದವರು ಉಪಸ್ಥಿತರಿದ್ದರು .