ಮಂಗಳೂರು ಕ್ವಿಜಿಂಗ್ ಫೌಂಡೇಶನ್ ಸಹಯೋಗದೊಂದಿಗೆ, ಯೆನ್‌ಕ್ವಿಝ್ 2025 ಸ್ಪರ್ಧೆಯು ನವೆಂಬರ್ 14 ಮತ್ತು 15 ರಂದು ಯೆನೆಪೋಯ ವರ್ಲ್ಡ್ ಸ್ಕೂಲ್ ಜೆಪ್ಪಿನಮೊಗರಿನ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಯೆನೆಪೋಯ ವರ್ಲ್ಡ್ ಸ್ಕೂಲ್ ಇದರ ಪ್ರಾಂಶುಪಾಲರಾದ ಅಂಥೋನಿ ಜೋಸೆಫ್ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ವಿದ್ಯಾರ್ಥಿಗಳಲ್ಲಿ ಕೌತುಕ ಹುಟ್ಟುಹಾಕಲು, ಶೈಕ್ಷಣಿಕ ಅರಿವು ಮತ್ತು ಆರೋಗ್ಯಕರ ಸ್ಪರ್ಧಾ ಮನೋಭಾವವನ್ನು ಹೆಚ್ಚಿಸಲು ಈ ಅಂತರ್-ಶಾಲಾ ರಸಪ್ರಶ್ನೆ ಸ್ಪರ್ಧೆಯು ಸಹಕಾರಿ ಯಾಗಲಿದೆ .ಯೆನೆಪೋಯ ಶಾಲೆಯ 25ನೇ ವಾರ್ಷಿಕೋತ್ಸವದಂಗ ಆಯೋಜಿತ ಯೆನ್‌ಕ್ವಿಝ್ 2025ರಲ್ಲಿ ಮಂಗಳೂರು ಮತ್ತು ಉಡುಪಿಯ ಶಾಲೆಯ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು .
ಮಂಗಳೂರು ಕ್ವಿಜಿಂಗ್ ಫೌಂಡೇಶನ್ ಇದರ ನಿರ್ದೇಶಕರಾದ ಡಾ ಅಣ್ಣಪ್ಪ ಕಾಮತ್ ಸ್ಪರ್ಧೆಯ ನಿಯಮವನ್ನು ವಿವರಿಸುತ್ತಾ , ಒಟ್ಟು ಎರಡು ವಿಭಾಗದಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ . ವರ್ಗ 1ರಲ್ಲಿ ತರಗತಿ 5 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ನವೆಂಬರ್ 14 ರಂದು ಸ್ಪರ್ಧೆ ನಡೆಯಲಿದೆ ಹಾಗು ನವೆಂಬರ್ 15 ರಂದು ತರಗತಿ 9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ . ಎರಡು ವರ್ಗದ ಸ್ಪರ್ಧಾ ವಿಜೇತರಿಗೆ ಪ್ರಥಮ 15,೦೦೦ ದ್ವಿತೀಯ 1೦,೦೦೦, ಮತ್ತು ತೃತೀಯಾ 5,೦೦೦ ರೂ ಗಳ ನಗದು ಬಹುಮಾನವಿದೆ.
ಆರಂಭದಲ್ಲಿ ಲಿಖಿತ ಪೂರ್ವಭಾವಿ ಸುತ್ತು ಮತ್ತು ಅದರಲ್ಲಿ ಆಯ್ಕೆಯಾದ ಅಗ್ರ ಆರು ಅರ್ಹತಾ ತಂಡಗಳಿಗೆ ಅಂತಿಮ ಸುತ್ತಿನ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ .ಒಟ್ಟು ನಗದು ಬಹುಮಾನಗಳ ಮೊತ್ತ ರೂ.60,000 ಇರಲಿದೆ ಎಂದರು .ಪ್ರತಿ ತಂಡವು ಇಬ್ಬರು ಸದಸ್ಯರನ್ನು ಒಳಗೊಂಡಿರಬಹುದು (ತಂಡದ ಸದಸ್ಯರು ಒಂದೇ ಶಾಲೆಗೆ ಸೇರಿರಬೇಕು ಎಂಬ ನಿರ್ಬಂಧವಿಲ್ಲ). ವಿಸ್ತ್ರತ ಕಲಿಕೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸುವನ್ವಯ ಸಾಮಾನ್ಯ ಜ್ಞಾನಕ್ಕೆ ಪ್ರಾಧಾನ್ಯತೆಯೊಂದಿಗೆ ಇಂಗ್ಲಿಷ್‌ನಲ್ಲಿ ನಡೆಯಲಿದೆ ಎಂದರು . .ಆಸಕ್ತ ವಿದ್ಯಾರ್ಥಿಗಳು ನವೆಂಬರ್ 10 ರ ಒಳಗೆ ನೋಂದಣಿ ಮಾಡಿಕೊಳ್ಳಬೇಕೆಂದು ತಿಳಿಸಿದರು .