ಮಂಗಳೂರು : ಇಂಡಸ್ ಟವರ್ಸ್ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿದ್ದ ನೂರಾರು ತಂತ್ರಜ್ಞರು ಹಾಗೂ ಭಾರತೀಯ ಪ್ರೈವೇಟ್ ಟೆಲಿಕಾಂ ಮನ್ಸೂರ್ ಸಂಘ (BPTMS) ಸದಸ್ಯರು ನಗರದ ಮಿನಿ ವಿಧಾನ ಸೌಧದ ಆವರಣದಲ್ಲಿ ಧರಣಿ ನಡೆಸಿ ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಾರೆ.
ಹೊಸ ಕಾನ್‌ಟ್ರಾಕ್ಟರ್ ಅಧಿಕಾರ ವಹಿಸಿಕೊಂಡ ನಂತರ ಅನೇಕ ಕಾರ್ಮಿಕರಿಗೆ ಕೆಲಸ ನೀಡದೆ ವಜಾಗೊಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳನ್ನು ಮರುಸ್ಥಾಪಿಸಲು ಹಾಗೂ ನ್ಯಾಯಯುತ ಕಾರ್ಮಿಕ ವ್ಯವಸ್ಥೆಗಾಗಿ ಹೋರಾಟ ಆರಂಭಿಸಿದ್ದಾರೆ.
ಮುಖ್ಯ ಬೇಡಿಕೆಗಳು:
- ಹೊಸ ಕಾನ್‌ಟ್ರಾಕ್ಟರ್ ಅಧಿಕಾರ ವಹಿಸಿಕೊಂಡ ಬಳಿಕ ಕೆಲಸದಿಂದ ವಂಚಿತರಾದ ಎಲ್ಲಾ ಕಾರ್ಮಿಕರಿಗೆ ತಕ್ಷಣ ಕೆಲಸ ನೀಡಬೇಕು.
- ಯಾವುದೇ ಕಾರ್ಮಿಕನು ಯೂನಿಯನ್ ಚಟುವಟಿಕೆಯಲ್ಲಿ ಭಾಗವಹಿಸಿದ ಕಾರಣಕ್ಕೆ ಕೆಲಸ ಕಳೆದುಕೊಳ್ಳಬಾರದು.
- ಕಾನೂನುಬದ್ಧ ಸೌಲಭ್ಯಗಳಾದ ವಾರದ ವಿಶ್ರಾಂತಿ ದಿನ, ರಾಷ್ಟ್ರೀಯ ಮತ್ತು ಹಬ್ಬದ ರಜೆ (NFH), 8 ಗಂಟೆಗಳ ಕರ್ತವ್ಯ ಮಿತಿ, ಹಾಗೂ ಹೆಚ್ಚುವರಿ ಕೆಲಸಕ್ಕೆ (overtime) ನ್ಯಾಯಸಮ್ಮತ ವೇತನ ನೀಡಬೇಕು.
- ನ್ಯಾಯಯುತ ವೇತನ ಪರಿಷ್ಕರಣೆ ಮತ್ತು ಎಲ್ಲರಿಗೂ ಸಮಾನ ವೇತನ ವ್ಯವಸ್ಥೆ ಜಾರಿಗೊಳಿಸಬೇಕು
- ಎಲ್ಲಾ ಕಾರ್ಮಿಕರಿಗೆ ವೈದ್ಯಕೀಯ ಮತ್ತು ಅಪಘಾತ ವಿಮೆ ನೀಡಬೇಕು.
- ಕರ್ತವ್ಯದ ವೇಳೆ ಸಾವು ಸಂಭವಿಸಿದಲ್ಲಿ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು.
- ಎಲ್ಲಾ ಫೀಲ್ಡ್ ಸಿಬ್ಬಂದಿಗೆ ಅಗತ್ಯವಾದ ಸುರಕ್ಷತಾ ಉಪಕರಣಗಳು (PPE) ಸಮಯಕ್ಕೆ ಸರಿಯಾಗಿ ನೀಡಬೇಕು.
- ಇಂಡಸ್ ಟವರ್ಸ್ ತನ್ನ ಎಲ್ಲಾ ಕಾನ್‌ಟ್ರಾಕ್ಟರ್‌ಗಳ ಕಾರ್ಮಿಕರಿಗೂ ಕಾನೂನುಬದ್ಧ ರಕ್ಷಣೆಯನ್ನು ಖಚಿತಪಡಿಸಬೇಕು.
- ಸಂಸ್ಥೆ ತಕ್ಷಣ BPTMS ಸಂಘದೊಂದಿಗೆ ಚರ್ಚೆ ಆರಂಭಿಸಬೇಕೆಂದು ಆಗ್ರಹಿಸಿದ್ದಾರೆ .