ನವೆಂಬರ್ 23 ರಂದು ಪದುವಾ ಮೈದಾನದಲ್ಲಿ ಲಯನ್ಸ್ ಮಹಿಳಾ ಮತ್ತು ಲಿಯೋ ಕ್ರಿಕೆಟ್ ಪ್ರೀಮಿಯರ್ ಲೀಗ್ ಕ್ರೀಡಾ ಕೂಟ

ಮಂಗಳೂರು: ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಮತ್ತು ಕೊಡಗು ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲೆ 317D ಇದರ ಪ್ರಥಮ ಬಾರಿಗೆ ಸ್ವತಂತ್ರವಾಗಿ ನಡೆಯಲಿರುವ ಲಯನ್ಸ್ ಮಹಿಳಾ ಮತ್ತು ಲಿಯೋ ಕ್ರಿಕೆಟ್ ಪ್ರೀಮಿಯರ್ ಲೀಗ್ ಕ್ರೀಡಾ ಕೂಟವನ್ನು, ಮಂಗಳೂರು ಪದುವಾ ಮೈದಾನದಲ್ಲಿ ನವೆಂಬರ್ 23 ರಂದು ನಡೆಯಲಿದೆ ಎಂದು ಕ್ರೀಡಾ ಕೂಟದ ಮುಖ್ಯ ಸಂಯೋಜಕಿ ಲಯನ್ ಆಶಾ ಸಿ. ಶೆಟ್ಟಿ ತಿಳಿಸಿದರು .

ಅವರು ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಕ್ರೀಡಾ ಕೂಟವನ್ನು ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಲಿ ಅರವಿಂದ ಶೆಣೈರವರು ಉದ್ಘಾಟಿಸಲಿದ್ದು, ವಿವಿಧ ಜಿಲ್ಲೆಗಳಿಂದ ದಾಖಲೆಯ 16 ತಂಡಗಳಲ್ಲಿ ಸುಮಾರು 250 ಕ್ರೀಡಾಳುಗಳು ಭಾಗವಹಿಸಲಿದ್ದು, ಸುಮಾರು 600 ಲಯನ್ಸ್ ಸದಸ್ಯರು ಭಾಗವಹಿಸಲಿದ್ದಾರೆ ಎಂದರು .

ಸಂಜೆ ಜರಗಲಿರುವ ಸಮಾರೋಪ ಸಮಾರಂಭದಲ್ಲಿ ಅಂತರಾಷ್ಟ್ರೀಯ ಕ್ರೀಡಾಳು ಮತ್ತು ಪ್ರಖ್ಯಾತ ಕ್ರಿಕೇಟ್ ತರಬೇತುದಾರರಾದ ಶಾಲಿನಿ ರಾಜೇಶ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ . ಈ ಸಂದರ್ಭದಲ್ಲಿ ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ 5 ಮಂದಿ ಮಹಿಳಾ ಕ್ರೀಡಾಪಟುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು .

-ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್, ಜಿಲ್ಲಾ ಪಂದ್ಯಾವಳಿಗಳ ಮುಖ್ಯ ಸಂಯೋಜಕರಾದ ಮೋಹನ್ ಕೊಪ್ಪಲ್ ಕದ್ರಿ. -ಜಿಲ್ಲಾ ಲಿಯೊ ಅಧ್ಯಕ್ಷೆ ಲಿಯೊ ಶ್ರೀನಿಧಿ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!