ಮಂಗಳೂರು: ರಾಜಕೀಯ ಚಾನೆಲ್ ಬಂದ್ ಆಗಿದೆ. ಈಗ ಸಂವಿಧಾನ ಚಾನೆಲ್ ಮಾತ್ರ ಇದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆಅವರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ರಾಜ್ಯದಲ್ಲಿ ನಡೆಯುತ್ತಿರುವ ಪವರ್ ಶೇರಿಂಗ್ ಬಗ್ಗೆ ಮಾತನಾಡಿದ ಅವರು , ನಾನು ಇತರರು ಮಾತನಾಡಿದ ರೀತಿಯಲ್ಲಿ ಮಾತನಾಡಲು ಆಗುವುದಿಲ್ಲ. ಈ ವಿಷಯ ನನಗೆ ನಿಮ್ಮಿಂದಲೇ ತಿಳಿದಿರುವುದು. ಸ್ಪೀಕರ್ ಆದ ಬಳಿಕ ನನ್ನ ರಾಜಕೀಯ ಚಾನೆಲ್ ಬಂದ್ ಆಗಿದೆ. ಈಗ ಸಂವಿಧಾನ ಚಾನೆಲ್ ಮಾತ್ರ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ .
ಇದೇ ಸಮಯ ಮಾಧ್ಯಮ ಪತ್ರಿನಿಧಿಗಳು ಎತ್ತಿದ ಭ್ರಷ್ಟಾಚಾರದ ಆರೋಪಕ್ಕೆ ಉತ್ತರಿಸಿದ ಖಾದರ್ , ಸತ್ಯ ಯಾವಾಗಲೂ ದಾಖಲೆಯಲ್ಲಿ ಇರುತ್ತದೆ. ಆರೋಪ ಮಾಡಿದವರು ಯಾವುದನ್ನೂ ಲಿಖಿತವಾಗಿ ಸ್ಪೀಕರ್ ಕಚೇರಿಗೆ ನೀಡಿಲ್ಲ. ಹಾಗಾಗಿ ಇದೆಲ್ಲಾ ಚರ್ಚೆಯಾಗುವ ವಿಷಯವೇ ಅಲ್ಲ. ಹಾಗಾಗಿ ಇದರ ಬಗ್ಗೆ ನಾನು ಹೆಚ್ಚೇನೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು .
ಜವಾಬ್ದಾರಿ ಸ್ಥಾನದಲ್ಲಿ ಇರುವ ವ್ಯಕ್ತಿಗಳು ಆರೋಪ ಮಾಡುವ ಮೊದಲು ಆ ಬಗ್ಗೆ ಅಧ್ಯಯನ ಮಾಡಲಿ. ಏನೇ ಆಕ್ಷೇಪವಿದ್ದರೂ ಆ ಬಗ್ಗೆ ಲಿಖಿತವಾಗಿ ದೂರು ನೀಡಬಹುದು. ಸಾಹಿತಿಗಳಿಗೆ 25000 ರೂ. ಶಾಲು ಹಾಕಲಾಗಿದೆ ಎಂದು ದೂರಲಾಗಿದೆ. ಸಾಹಿತಿಗಳಿಗೆ ಗೌರವ ನೀಡುವಾಗ ಅದಕ್ಕೆ ತಕ್ಕ ರೀತಿಯಲ್ಲಿಯೇ ಸನ್ಮಾನಿಸಬೇಕಾಗುತ್ತದೆ. ಅದು ರೇಷ್ಮೆಯ ಶಾಲು. ಅದನ್ನು ಕರ್ನಾಟಕ ರಾಜ್ಯ ಸಿಲ್ಕ್ ಬೋರ್ಡ್‌ನಿಂದಲೇ ಖರೀದಿಸಲಾಗಿದೆ ಎಂದವರು ಹೇಳಿದ್ದಾರೆ.