ಬಿಸಿಯೂಟ ನೌಕರರ ಅನಿರ್ಧಷ್ಟಾವದಿ ಮುಷ್ಕರ 2ನೇ ದಿನಕ್ಕೆ

ಮಾತೆ ಮಾತೆ ಎನ್ನುತ್ತಾ ಗೋವನ್ನು ಕಡಿದು ಗೋಮಾಂಸ ಮಾರಾಟ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರಕಾರ ಅಡುಗೆ ಸಿಬ್ಬಂದಿಯರನ್ನೂ ಮಾತೆ ಮಾತೆ ಎನ್ನುತ್ತಾ ಸಂಬಳ ನೀಡದೆ ನಮ್ಮ ದೇಹದಲ್ಲಿ ರಕ್ತ‌ಮಾಂಸವೇ ಇಲ್ಲದಂತೆ ಮಾಡಿ ಅವರ ಬದುಕನ್ನೇ ನಾಶ ಮಾಡುತ್ತಿದೆ ಎಂದು ಸಿಐಟಿಯು ದ.ಕ. ಜಿಲ್ಲಾ ಅಧ್ಯಕ್ಷರಾದ ಬಿ.ಎಂ‌.ಭಟ್ ಹೇಳಿದರು.

ಅವರು ಇಂದು ಮಂಗಳೂರು ಕ್ಲಾಕ್ ಟವರ್ ಎದುರು ಸ್ಕೀಮ್ ನೌಕರರಾದ ಬಿಸಿಯೂಟ ತಯಾರಕರ ಸಂಬಳ ಏರಿಕೆ ಕೆಲಸದ ಭದ್ರತೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟ ಹೋರಾಟದ ಎರಡನೇ ದಿನದ ದರಣಿಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ಕಳೆದ 2014 ರಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರಕಾರ ಬಿಸಿಯೂಟ‌ ತಯಾರಿಸುವ ಸಿಬ್ಬಂದಿಗಳಿಗೆ ಕನಿಷ್ಟ ಸಂಬಳವನ್ನೂ ಏರಿಸದಿರುವುದು ಯಾವಸೀಮೆಯೆ ಬೇಟಿ ಬಚಾವೋ ಎಂದು ಟೀಕಿಸಿದರು. ಹತ್ತಿರದ ಕೇರಳ ರಾಜ್ಯದ ಕಮ್ಯೂನಿಸ್ಟ್ ಸರಕಾರ ಬಿಸಿಯೂಟ ಸಿಬ್ಬಂದಿಗಳಿಗೆ ದಿನಕ್ಕೆ 600 ರೂ. ಸಂಭಳ ನೀಡುತ್ತಿದ್ದರೂ, ಈ ಬಿಜೆಪಿ, ಕಾಂಗ್ರೇಸ್ ಸರಕಾರಗಳಿಗೆ ಕಾಣುತ್ತಿಲ್ಲ ಏಕೇ ? ಎಂದು ಟೀಕಿಸಿದರು. ಬಿಸಿಯೂಟದವರು ಸೇವೆ ಮಾಡೋರೇ ವಿನಃ ಕೆಲಸಗಾರರಲ್ಲ ಎನ್ನುವ ಸರಕಾರದ ಶಾಸಕ ಸಂಸದರಿಗೆ ಯಾಕೆ ಲಕ್ಷ‌ಲಕ್ಷ ಸಂಬಳ ಕೊಡುತ್ತಿದೆ. ಅವರ ಮೊಬೈಲ್ ರಿಚಾರ್ಜಿಗೆ ತಿಂಗಳಿಗೆ ಕೊಡುವ 20,000 ದಷ್ಟನ್ನಾದರೂ ನಮಗೆ ಸಂಬಳ ಕೊಡಿ, ಗೃಹ ಲಕ್ಷ್ಮಿಯನ್ನೂ ನಮಗೆ ಸಂಬಳ ಎಂದು ಅಂಗೀಕರಿಸಿ ಕೊಡಿ ಎಂದು ಒತ್ತಾಯಿಸಿದರು.

ಬಳಿಕ ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಅವರು ಮಾತಾಡುತ್ತಾ ಊರಿನ‌ ಮಕ್ಕಳಿಗೆ ಬಿಸಿಬಿಸಿ ಊಟ ತಯಾರಿಸಿ ಕೊಡುವ ತಾಯಂದಿಗೆ ತಮ್ಮ ಮಕ್ಕಳಿಗೆ ತಣ್ಣಗಿನ ಊಟ ಕೊಡಲಷ್ಟೂ ಸಂಬಳ ನೀಡದ ಸರಕಾರಗಳ ವಿರುದ್ದ ನಮ್ಮ ಹೋರಾಟ ಎಂದರು.ಈ ಸಂದರ್ಭ ಸಿಐಟಿಯು ಮುಖಂಡರಾದ ಪದ್ಮಾವತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಬಿ. ಕೆ. ಇಮ್ತಿಯಾಸ್ ಅಕ್ಷರದಾಸೋಹ ಸಂಘದ ಕಡಬ ತಾಲೂಕು ಕಾರ್ಯದರ್ಶಿ ಸುಲೋಚನ , dyfi ಮುಖಂಡ ಅಭಿಷೇಕ್ ಬೆಳ್ತಂಗಡಿ ಮೊದಲಾದವರು ಮಾತಾಡಿದರು.

ಹೋರಾಟದಲ್ಲಿ ಪುತ್ತೂರು ತಾಲೂಕಿನ ಅಧ್ಯಕ್ಷರಾದ ರಂಜಿತ, ಕಾರ್ಯದರ್ಶಿ ಲತಾ, ಬೆಳ್ತಂಗಡಿ ತಾಲೂಕಿನ ಮುಖಂಡರಾದ‌ ಸುನೀತ, ವಿನೋದ , ಜಾನಕಿ ಸಿಐಟಿಯು ಮುಖಂಡರಾದ ಪ್ರಮೋದಿನಿ, ಅಕ್ಷರದಾಸೋಹ ಸಂಘದ ಮುಖಂಡರುಗಳಾದ ಬಬಿತ, ಝರೀನ, ರೇಖಾ, ಭವಾನಿ, ಮಮತ, ಹೇಮಲತ ಕಡಬ ಮೊದಲಾದವರು ಉಪಸ್ತಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!