ವಿಧಿಯೇ ನೀನೆಷ್ಟು ಕ್ರೂರಿ …. !

ಮಂಗಳೂರು: ಅಜ್ಜನ ಕೈಹಿಡಿದು ಹೆದ್ದಾರಿ ದಾಟಿ ತಿಂಡಿಗೆ ಹೋಗಿದ್ದ ಮಗು ಹಿಂತಿರುಗಿ ಬರುತ್ತಿದ್ದಾಗ ಕಾರು ಡಿಕ್ಕಿಯಾಗಿ ಮೃತ ಪಟ್ಟ ದಾರುಣ ಘಟನೆ ಚಾರ್ಮಾಡಿಯಲ್ಲಿ ನಡೆದಿದೆ.ಅಜ್ಜನ ಜೊತೆಗೆ ಕೈ ಹಿಡಿದು ತಿಂಡಿಗೆ ತೆರಳಿದ್ದ ಮಗು ಹೆದ್ದಾರಿಯಲ್ಲಿ ಕೈ ಬಿಟ್ಟು ಹಿಂದಕ್ಕೆ ತೆರಳಿದ ವೇಳೆ ಕಾರು ಡಿಕ್ಕಿಯಾಗಿ ಮೂರು ವರ್ಷದ ಮಗು ದಾರುಣ ಮೃತಪಟ್ಟಿದೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಎಂಬಲ್ಲಿ ಘಟನೆ ನಡೆದಿದೆ.ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯ ಬೀಟಿಗೆ ನಿವಾಸಿ ಸಿದ್ದಿಕ್ ಯು.ಪಿ ಅವರ ಮೂರು ವರ್ಷದ ಮಗು ಮುಹಮ್ಮದ್ ಹಝೀರಿನ್ ಮೃತ ದುರ್ದೈವಿ.ಚಾರ್ಮಾಡಿ ಕಡೆಯಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ಕಾರು ಮಗುವಿಗೆ ಢಿಕ್ಕಿ ಹೊಡೆದಿದೆ. ದೂರಕ್ಕೆ ಎಸೆಯಲ್ಪಟ್ಟ ಮಗುವನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಂಗಳೂರಿನ ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಮೃತಪಟ್ಟಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿದ್ದು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!