ಡಿಸೆಂಬರ್ 14 ರಂದು ದಕ್ಷಿಣ ಕನ್ನಡ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಶನ್ ಮಂಗಳೂರು ಆಯೋಜಿಸುವ “ದಕ್ಷಿಣ ಕನ್ನಡ ಉಡುಪಿ ಹಾಗು ಕೊಡಗು ಅಂತರ್ ಜಿಲ್ಲಾ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟ”

ಮಂಗಳೂರು: ದಕ್ಷಿಣ ಕನ್ನಡ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಶನ್ ಮಂಗಳೂರು ಆಯೋಜಿಸುವ “ದಕ್ಷಿಣ ಕನ್ನಡ ಉಡುಪಿ ಹಾಗು ಕೊಡಗು ಅಂತರ್ ಜಿಲ್ಲಾ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟ” ವು ಡಿಸೆಂಬರ್ 14 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಮಿತಿಯ ಉಪಾಧ್ಯಕ್ಷೆ ರೇಖಾ ಶೆಟ್ಟಿ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ , ೩೦ ವರ್ಷ ಮೇಲ್ಪಟ್ಟವರಿಗೆ ಓಟ , ಜಿಗಿತ , ಎಸೆತದ ಆಟಗಳಿವೆ ಮತ್ತು ೧೨ ವರ್ಷ ಕೆಳಗಿನ ಮಕ್ಕಳಿಗೆ ಓಟ , ಲಾಂಗ್ ಜಂಪ್ , ಶಾಟ್ ಪುಟ್ , ಕ್ರೀಡೆಯನ್ನು ನಡೆಸಲಾಗುವುದೆಂದು ತಿಳಿಸಿದರು . ವಿಶೇಷವಾಗಿ ವಿಕಲ ಚೇತನ ಮಕ್ಕಳಿಗೂ ಆಕರ್ಷಕ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಯುವ ಸಬಲೀಕರಣ ಕ್ರೀಡಾ ಇಲಾಖೆ ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ಪ್ರದೀಪ್ ಡಿಸೋಜ , ಮಧು ಕನ್ಸೆಕ್ಷನ್ ನ ವಿಜಯಲಕ್ಷ್ಮಿ ಮಲ್ಲಿ ಸಹಿತ ಇತರರು ಭಾಗವಹಿಸಲಿದ್ದಾರೆ .

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಕೆ ಜಗದೀಶ್ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಪ್ರಚೇತ ಕೆ , ಜತೆ ಕಾರ್ಯದರ್ಶಿ ಸುನಿತಾ ಹರೀಶ್ , ಕೋಶಾಧಿಕಾರಿ ನಂದ ಕುಮಾರ್ ಸಹಿತ ಮುಂತಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!