ಡಿ. 14 ರಂದು ಕುದ್ಮುಲ್ ರಂಗರಾವ್ ಟೌನ್ ಹಾಲ್‌ನಲ್ಲಿ ಲತಾಕಿ ಆವಾಜ್ ಶೋಭಾ ಕೆ ಸಾಥ್ ಸಂಗೀತೋತ್ಸವ … !

ಮಂಗಳೂರು: ಖ್ಯಾತಗಾಯಕಿ ಲತಾ ಮಂಗೇಶ್ವರ್ ಅವರ ಹಿಂದಿ ಹಾಡುಗಳನ್ನೊಳಗೊಂಡ ಒಟ್ಟು 24 Solo ಮತ್ತು Duet ಹಾಡುಗಳನ್ನು ಆಯ್ಕೆ ಮಾಡಿ ಲತಾಕಿ ಆವಾಜ್ ಶೋಭಾ ಕೆ ಸಾಥ್ ಎಂಬ ಕಾರ್ಯಕ್ರಮವನ್ನು ಡಿ 14 ರಂದು ನಗರದ ಕುದ್ಮುಲ್ ರಂಗರಾವ್ ಟೌನ್ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಶೋಭಾ ಭಾಸ್ಕರನ್ ತಿಳಿಸಿದರು .ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಕಾರ್ಯಕ್ರಮದ ವಿಶೇಷವೇನೆಂದರೆ, ನಾನು ನಡೆಸುತ್ತಿರುವ ಸಿಂಚನಮೆಲೊಡಿಸ್ ತಂಡದ ಗಾಯಕರನ್ನೇ ಗಾಯನ ಸ್ಪರ್ಧೆಯಲ್ಲಿ ಧ್ವನಿಯಾಗಲಿದ್ದಾರೆ . ಹಾಡುಗಳ ಮಧ್ಯೆ ಒಂದೆರಡು ನೃತ್ಯ ಕಾರ್ಯಕ್ರಮಗಳಿರುತ್ತವೆ ಎಂದರು .

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿರಿಯ ಸಾಹಿತಿ ಹುಸೈನ್ ಕಾಟಿಪಳ್ಳರವರು ವಹಿಸುತ್ತಾರೆ. ಉದ್ಘಾಟಕರಾಗಿ ಖ್ಯಾತ ಸಂಗೀತ ತಜ್ಞರೂ, ಗುರುಗಳೂ ಆದ ರೋಶನ್ ಫ್ರಾನ್ಸಿಸ್ ಮಾರ್ಟಿಸ್‌ರವರು, ಗಣ್ಯ ಅತಿಥಿಗಳಾಗಿ ಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲರಾದ ಲ|| ಕುಡುಪಿ ಅರವಿಂದ್ ಶೆಣೈ MUF ಹಾಗೂ ದ.ಕ ಜಿಲ್ಲಾ ಕೇರಳ ಸಮಾಜಂ ಇದರ ಅಧ್ಯಕ್ಷರಾದ ಟಿ.ಕೆ ರಾಜನ್‌ರವರು ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ . . ದೇಶವಿದೇಶಗಳಲ್ಲಿ ತಮ್ಮ ಪ್ರತಿಭೆಗಳಿಂದ ಹೆಸರುಗಳಿಸಿದ ಪ್ರಖ್ಯಾತಕಲಾವಿದರು ನಮ್ಮೊಂದಿಗಿರುವರು ಎಂದು ತಿಳಿಸಿದರು .

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಮನೋಜ್ ಕುಮಾರ್ , ನೌಶದ್ , ಲ /ಆಸಿಫ್ , ಸುರೇಶ್ ಬಂಗೇರ ಸಹಿತ ಇತರರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!