ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಲ್ಲಿ ವ್ಯತ್ಯಸ್ತವಾದ ರಾಜಕೀಯ ಪಕ್ಷ ಅಥವಾ ಒಕ್ಕೂಟಗಳು ಅಧಿಕಾರ ನಡೆಸುವಾಗ ರಾಜ್ಯಪಾಲರ ಅಧಿಕಾರ ಕೇಂದ್ರವಾದ ರಾಜ್ಯಭವನವು ರಾಜಕೀಯ ಚಟುವಟಿಕೆಯ ಕೇಂದ್ರವಾಗಿ ಪರಿವರ್ತಿತವಾಗುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾದರೂ ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ.
ಸಂವಿಧಾನದ ಪ್ರಕಾರ ರಾಜ್ಯಪಾಲರು ನಿಷ್ಪಕ್ಷಪಾತವಾಗಿ ಅಧಿಕಾರ ಚಲಾಯಿಸಬೇಕಿದ್ದು ರಾಜ್ಯವೊಂದದರ ಪ್ರಧಾನ ಆಡಳಿತ ಅಧಿಕಾರಿಯಾಗಿದ್ದಾರೆ.
ಕೇರಳ ದಲ್ಲಿ ರಾಜ್ಯ ಸರ್ಕಾರ v/ s ರಾಜ್ಯಪಾಲರು.
ಇತ್ತೀಚಿನ ಕೆಲವು ವರ್ಷಗಳಲ್ಲಿ ಕೇರಳದಲ್ಲಿ ರಾಜ್ಯಪಾಲರಿಗೂ ರಾಜ್ಯ ಸರಕಾರಕ್ಕೂ ಶೀತಲ ಸಮರ ಏರ್ಪಟ್ಟಿದ್ದು ಅದು ಶಮನಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಈ ಹಿಂದೆ ಕೇರಳ ರಾಜ್ಯಪಾಲರಾಗಿದ್ದ ಆರಿಫ್ ಮೊಹಮ್ಮದ್ ಖಾನ್ ಹಾಗೂ ಮುಖ್ಯಮಂತ್ರಿ ಪೀಣ ರಾಯಿ ವಿಜಯನ್ ರಿಗೆ ಕೆಲವು ಆಡಳಿತಾತ್ಮಕ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ತಾರಕಕೇರಿದ್ದವು. ಇವರ ಈ ಒಳಜಗಳ ಬೀದಿಗೆ ಬಂದಿತ್ತು.
ವಿಶ್ವವಿದ್ಯಾನಿಲಯದ ಕೆಲವು ಪ್ರತಿಬಂಧಕ ಕಾಯಿದೆ ತಿದ್ದುಪಡಿ, ವಿ ವಿ ಕುಲಪತಿಗಳ ನೇಮಕದ ವಿಚಾರದಲ್ಲಿ ರಾಜ್ಯ ಸರಕಾರದ ಸಂಪುಟ ತೀರ್ಮಾನಕ್ಕೆ ರಾಜಪಾಲರು ಸಹಿ ಹಾಕದೆ ಅದನ್ನು ಹಿಂತುರುಗಿಸಿದ್ದು, ರಾಜ್ಯ ಸರಕಾರದ ಕೆಲವು ತೀರ್ಮಾನಗಳನ್ನು ರಾಜ್ಯಪಾಲರು ಪ್ರಶ್ನಿಸುತ್ತಿದ್ದರು. ಇವರ ಈ ವೈಮನಸ್ಸು ಕೇಂದ್ರ ಸರಕಾರದ ಗಮನಕ್ಕೂ ಬಂದು ಕೊನೆಗೆ ಕೇರಳಕ್ಕೆ ಗುಜರಾತ್ ಮೂಲದ ರಾಜೇಂದ್ರ ಅರ್ಲೆಕರ್ ರನ್ನು ನೂತನ ರಾಜ್ಯಪಾಲರನ್ನಾಗಿ ಕೇಂದ್ರ ಸರಕಾರ ನೇಮಿಸಿತು.
ಸಹಜವಾಗಿಯೇ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ವ್ಯತ್ಯಾಸ್ತವಾದ ಒಕ್ಕೂಟಗಳಿಂದಅಧಿಕಾರ ನಡೆಸುತ್ತಿದ್ದು, ರಾಜ್ಯಪಾಲರ ಬದಲಾವಣೆಯ ನಂತರವೂ ಇವರ ಶೀತಲ ಸಮರ ಕೊನೆಗೊಂಡಿಲ್ಲ. ಇತ್ತೀಚೆಗೆ ವಿಶ್ವ ಪರಿಸರ ದಿನದಂದು ರಾಜ ಭವನದಲ್ಲಿ ಸರಕಾರಿ ಅಧಿಕೃತ ಕಾರ್ಯಕ್ರಮದಲ್ಲಿ ಭಾರತಮಾತೆಯ ಭಾವಚಿತ್ರವಿರಿಸಿದ್ದನ್ನು ಕೃಷಿ ಸಚಿವರು ಸಹಿತ ಬಹುತೇಕ ಸಚಿವರು ವಿರೋಧಿಸಿ ಸರಕಾರಿ ಕಾರ್ಯಕ್ರಮಕ್ಕೆ ಭಾರತ ಮಾತೆಯ ಚಿತ್ರ ವಿರಿಸಿದ್ದು ರಾಜ್ಯಪಾಲರು ರಾಜಭವನವನ್ನು ಕೇಸರಿಕರಣ ಮಾಡುತ್ತಿದ್ದಾರೆಂದು ಆರೋಪಿಸಿದ್ದರು.
ನಿನ್ನೆ ರಾಜ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ರಾಜ್ಯ ಸ್ಕೌಟ್ ಅಂಡ್ ಗೈಡ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಇದೇ ಪ್ರಸಂಗ ಮರುಕಳಿಸಿದ್ದು ರಾಜ್ಯಪಾಲರು ಮತ್ತೆ ಭಾರತ ಮಾತೆಯ ಭಾವಚಿತ್ರವನ್ನು ಸಮಾರಂಭದಲ್ಲಿ ಇಟ್ಟದ್ದು ಮತ್ತೆ ವಿವಾದಕ್ಕೆ ಕಾರಣವಾಯಿತು. ಭಾರತ ಮಾತೆಯ ಭಾವಚಿತ್ರ ವಿರಿಸಿದ್ದಕ್ಕೆ ಸಿಡಿಮಿಡಿಗೊಂಡ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಕಾರ್ಯಕ್ರಮವನ್ನು ಬಹಿಷ್ಕರಿಸಿ ಅರ್ಧದಲ್ಲೇ ಕಾರ್ಯಕ್ರಮದಿಂದ ಎದ್ದು ಹೋದರು.
ರಾಜ್ಯಪಾಲರು ರಾಜ ಭವನವನ್ನು ರಾಜಕೀಯ ಮಾಡುತ್ತಿದ್ದಾರೆಂದು, ಸಂವಿಧಾನ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆಂದು ಸಚಿವರು ಆರೋಪಿಸಿದರು.ಆದರೆ ರಾಜ್ಯಪಾಲರು ಇರುವ ಕಾರ್ಯಕ್ರಮದಿಂದ ಕ್ಯಾಬಿನೆಟ್ ಸಚಿವರೊಬ್ಬರು ಕಾರ್ಯಕ್ರಮವನ್ನು ಬಹಿಷ್ಕರಿಸಿ ಅರ್ಧದಲ್ಲಿ ಹೋಗುವುದು ಸರಿಯಲ್ಲವೆಂದೂ ಪ್ರೊಟೊ ಕಾಲ್ ನಿಯಮ ಉಲ್ಲಂಘೀಸಿದ್ದಾರೆಂದೂ ರಾಜಭವನದ ಪ್ರಕಟಣೆ ಆರೋಪಿಸಿ ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ವೀಕೆಂದ್ರಿಕ್ರತ ಆಡಳಿತ ವ್ಯವಸ್ಥೆ ಯಲ್ಲಿ ರಾಜ್ಯಪಾಲರು ಹಾಗೂ ರಾಜ್ಯ ಸರಕಾರಗಳು ಹೊಂದಾಣಿಕೆಯಿಂದ ಅಧಿಕಾರ ನಡೆಸಿ ಕೇಂದ್ರ ಸರಕಾರದ ಅನುದಾನವನ್ನು ಬಳಸಿ ಕೊಂಡು ರಾಜ್ಯದ ಅಭಿವೃದ್ಧಿ ಮಾಡ ಬೇಕಾದುದ್ದು ಇವರ ಆದ್ಯ ಕರ್ತವ್ಯ ವಾಗಿದೆ. ತನ್ನ ರಾಜಕೀಯ ಸಿದ್ದಾಂತವನ್ನು ಬದಿಗಿಟ್ಟು ಪ್ರಜೆಗಳ ಹಿತವನ್ನು ಬಯಸುವ ಇವರುಗಳೇ ಈ ರೀತಿ ಯಾಗಿ ಬೀದಿಗೆ ಬಂದು ಜಗಳ ವಾಡುತ್ತಿರುವುದು ವಿಷಾದನೀಯ. ಇನ್ನಾದರೂ ರಾಜ್ಯಸರಕಾರ ಹಾಗೂ ರಾಜ್ಯಪಾಲರು ಜೊತೆಯಾಗಿ ಅಧಿಕಾರ ನಡೆಸಿ ಪ್ರಜಾಪ್ರಭುತ್ವ ವನ್ನು ಗಟ್ಟಿ ಗೊಳಿಸಬೇಕಾಗಿದೆ.