ಉಳ್ಳಾಲ- ಮೀನು ಆಹಾರ ತಯಾರಿಕಾ ಘಟಕದ ಗೋಡೌನ್ ಗೆ ಬೆಂಕಿ ತಗಲಿ ಅಪಾರ ನಷ್ಟ .

ಮಂಗಳೂರು: ಉಳ್ಳಾಲ- ಮೀನು ಆಹಾರ ತಯಾರಿಕಾ ಘಟಕದ ಗೋಡೌನ್ ಗೆ ಬೆಂಕಿ ತಗಲಿ ಅಪಾರ ನಷ್ಟ ಸಂಭವಿಸಿದೆ.ಮೀನಿನ ಆಹಾರ ತಯಾರಿ ಮತ್ತು ಸಂಸ್ಕರಣಾ ಘಟಕದ ಗೋಡೌನ್ ಗೆ ಬೆಂಕಿ ಬಿದ್ದ ಘಟನೆ ಉಳ್ಳಾಲದ ಕೋಟೆಪುರದಲ್ಲಿ ಸಂಭವಿಸಿದೆ. ಈ ಪರಿಸರದಲ್ಲಿ ಹಲವು ಮೀನಿನ ಪ್ಯಾಕ್ಟರಿಗಳಿದ್ದರೂ ಯಾವುದೇ ರೀತಿಯ ಬೆಂಕಿ ಅವಘಡ ತಪ್ಪಿಸುವ ಸುರಕ್ಷತಾ ವ್ಯವಸ್ಥೆ ಇಲ್ಲ ಎಂದು ಹೇಳಲಾಗುತ್ತಿದೆ.

ಬೆಂಕಿ ಅವಘಢಕ್ಕೆ ಒಳಗಾದ ಎಂಎಪಿ ಫಿಶ್ ಫುಡ್ ಗೋದಾಮು ಖಾದರ್ ಎಂಬುವರಿಗೆ ಸೇರಿದ್ದು ಎಂದು ಹೇಳಲಾಗಿದ್ದು, ಸಂಜೆ ವೇಳೆ ಗೋದಾಮಿನ ಒಳಗೆ ಕಾಣಿಸಿಕೊಂಡ ಬೆಂಕಿ ಒಮ್ಮಿಂದೊಮ್ಮೆಲೇ ಸುತ್ತಲೂ ವ್ಯಾಪಿಸಿತು. ಬೆಂಕಿಯ ಕೆನ್ನಾಲೆ ಗೋದಾಮಿನ ಆಚೆಗೂ ಚಾಚಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ನೀರು ಎರಚಿ ಬೆಂಕಿ ನಂದಿಸಲು ಯತ್ನಿಸಿದರು. ನಂತರ ಮಂಗಳೂರಿನಿಂದ ಬಂದ ಅಗ್ನಿಶಾಮಕ ದಳದ ವಾಹನ ಬಂದು ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಯಿತು.

ಇಲ್ಲಿನ 14 ಫಿಶ್ ಫುಡ್ ಮತ್ತು ಆಯಿಲ್ ಮಿಲ್‌ಗಳು ಪ್ರತಿವರ್ಷ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತವೆ. ಅವುಗಳಲ್ಲಿ ಸುರಕ್ಷತಾ ಕ್ರಮಗಳನ್ನೇ ಅನುಸರಿಸುತ್ತಿಲ್ಲ. ದುರ್ಘಟನೆ ಸಂಭವಿಸಿದಾಗ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನ 15 ಕಿ.ಮೀ ದೂರದ ಮಂಗಳೂರಿನಿಂದ ಬರಬೇಕಾಗಿದೆ. ಸ್ವಲ್ಪ ಎಚ್ಚರಿಕೆ ತಪ್ಪಿದರೂ ಸ್ಥಳದಲ್ಲಿ ವಾಸಿಸುವ ಸಾವಿರಾರು ಮನೆಗೂ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!