ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತನ 7ನೇ ವಾರ್ಡ್ ವ್ಯಾಪ್ತಿಯ ಚೌಕಿಯಲ್ಲಿ, ಕಳೆದ ಹತ್ತು ದಿನಗಳಿಂದ ಕತ್ತಿಗೆ ಹಗ್ಗ ಸಿಕ್ಕಿಕೊಂಡು ನೋವನ್ನು ಸಹಿಸಲಾರದೆ ನಾಡಿನ ಜನತೆಯನ್ನು ನಡುಕಿಗೆ ಒಳಪಡಿಸುವಂತಹ ಸ್ಥಿತಿಯಲ್ಲಿ ನರಳುತ್ತಿದ್ದ ಹಸುವನ್ನು, ಸ್ಥಳೀಯರು ಹಾಗೂ ಅಗ್ನಿಶಾಮಕದಳ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ರಕ್ಷಣೆ ಮಾಡಲಾಯಿತು.
ಕಳೆದ 10 ದಿವಸದಿಂದ ಜೀವನ್ಮರಣದೊಂದಿಗೆ ಹೋರಾಡುತಿದ್ದ ಹಸುವಿನ ಹತ್ತಿರ ಕೂಡಾ ಸುಳಿಯಲು ಸಾಧ್ಯವಾಗದ ಸ್ಥಿತಿ ಎದುರಾಗಿತ್ತು. ನಿರಂತರವಾಗಿ ಸುರಿಯುತಿದ್ದ ಮಳೆಯಲ್ಲಿ ಒದ್ದೆಯಾಗುತ್ತಿರುವುದನ್ನು ನೋಡಿ ಅದನ್ನು ಅಲ್ಲಿಂದ ರಕ್ಷಣೆ ಮಾಡಲು ಮುಂದಾಗುವಾಗ ಹೆದರುತಿದ್ದ ಹಸು ಯಾರನ್ನೂ ಹತ್ತಿರ ಸುಳಿಯಲು ಬಿಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಸುವನ್ನು ಹೇಗಾದರೂ ರಕ್ಷಿಸಬೇಕೆಂಬ ಉದ್ದೇಶದಿಂದ ಊರವರು ಅಗ್ನಿಶಾಮಕ ದಳವನ್ನು ಕರೆಸಿ ಅವರ ಜೊತೆಯಾಗಿ ಕಾರ್ಯಾಚರಣೆ ನಡೆಸಿ ಅತಿ ಸಾಹಸಿಕವಾಗಿ ಹಸುವನ್ನು ರಕ್ಷಿಸದ್ದಾರೆ.
ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕಧಳದೊಂದಿಗೆ ರಕ್ಷಣಾ ಕಾರ್ಯದಲ್ಲಿ ಜನಪ್ರತಿನಿಧಿ ಅಬೂಬಕ್ಕರ್ ಸಿದ್ದಿಕ್, ಶರೀಫ್ ಪಾವೂರು, ಸುಹೈಲ್, ಹಾರಿಸ್, ರಮೇಶ್, ಫಹದ್ ಮತ್ತು ಶಂಶು ಮಂಜೇಶ್ವರ ಮೊದಲಾದವರು ಕೈ ಜೋಡಿಸಿದ್ದಾರೆ.