ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸಹಿತ ಇಬ್ಬರಿಗೆ ಮೂರು ತಿಂಗಳ ಸಜೆ -ತೀರ್ಪು ಪ್ರಕಟಿಸಿದ ನ್ಯಾಯಾಲಯ

ಕಾಸರಗೋಡು : ಡೆಪ್ಯೂಟಿ ತಹಶೀಲ್ದಾರ್ ರನ್ನು ತಡೆದು ಆಕ್ರಮಿಸಿ ಹಲ್ಲೆಗೈದ ಕೇಸಿನಲ್ಲಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸಹಿತ ನಾಲ್ವರ ವಿರುದ್ಧ ಕೆಳ ನ್ಯಾಯಾಲಯ ನೀಡಿದ್ದ ಶಿಕ್ಷಾ ತೀರ್ಪಿಗೆ ಜಿಲ್ಲಾ ನ್ಯಾಯಾಲಯ ಅನುಮೋದನೆ ನೀಡಿದೆ.


ಮೂರು ತಿಂಗಳ ಸಜೆ ಸಹಿತ 20ಸಾವಿರ ರೂ ದಂಡ ವಿಧಿಸಿ ಕಾಸರಗೋಡು ಪ್ರಥಮದರ್ಜೆ ನ್ಯಾಯಾಲಯ ಶಿಕ್ಷೆ ವಿಧಿಸಿತು. ದಂಡ ಪಾವತಿಸದಿದ್ದರೆ ಹೆಚ್ಚುವರಿ ಒಂದು ತಿಂಗಳು ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ.

ಶಾಸಕ ಎಕೆಎಂ ಅಶ್ರಫ್ ಹೊರತಾಗಿ ಬಶೀರ್ ಅಬ್ದುಲ್ಲ ಕಾಜ, ಕಾಯಿಂಞಿ ಯಾನೆ ಅಬ್ದುಲ್ ಖಾದರ್ ಎಂಬಿವರು ಶಿಕ್ಷೆಗೊಳಗಾದ ಇತರರಾಗಿದ್ದಾರೆ.
2010 ನವಂಬರ್ 25ರಂದು ಮಧ್ಯಾಹ್ನ 1ಗಂಟೆಗೆ ಮಂಜೇಶ್ವರ ಬ್ಲಾಕ್ ಪಂಚಾಯತ್ ಆಫೀಸಿನಲ್ಲಿ ಡೆಪ್ಯೂಟಿ ತಹಶೀಲ್ದಾರ್ ರನ್ನು ತಡೆದು ನಿಲ್ಲಿಸಿ ಆಕ್ರಮಿಸಿದ ಘಟನೆ ನಡೆದಿತ್ತು.


ಆರೋಪಿಗಳು ಗುಂಪು ಸೇರಿ ತಹಶೀಲ್ದದಾರರನ್ನು ಆಕ್ರಮಿಸಿದ ಘಟನೆಗೆ ಕೇಸು ದಾಖಲಾಗಿತ್ತು. ಪ್ರೋಸಿಕ್ಯೂಷನಿಗಾಗಿ ನ್ಯಾಯವಾದಿ ಜಿ. ಚಂದ್ರಮೋಹನ್ ಹಾಜರಾದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!