ಮೀಂಜ : ಸ್ಪಂದನ ಆರ್ಟ್ಸ್ ಆಂಡ್ ಸ್ಪೋರ್ಟ್ ಕ್ಲಬ್ ತಿಲಕ್ ನಗರ ಎಲಿಯಾಣ ವತಿಯಿಂದ 4ನೇ ವರ್ಷದ ಗಣೇಶೋತ್ಸವವು ಬಹಳ ವಿಜೃಂಭಣೆಯಿಂದ ಜರಗಿತು.ಬೆಳಗ್ಗೆ 6 ಗಂಟೆಗೆ ಗಣಪತಿ ಪ್ರತಿಷ್ಠೆ ಗಣಪತಿ ಹವನ ನಡೆದು ಶ್ರೀ ಶಾಸ್ತ ಭಜನಾ ಮಂದಿರ ಚಿನಾಲದ ವತಿಯಿಂದ ಭಜನಾ ಸೇವೆ ನಡೆಯಿತು.ನಂತರ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆದವು.ನಂತರ ಸಭಾ ಕಾರ್ಯಕ್ರಮ ನಡೆಯಿತು.
ಉತ್ತಮ ಕೃಷಿ ಕಾರ್ಮಿಕರಿಗೆ ನೀಡುವ ಈ ವರ್ಷದ ‘ ಸ್ಪಂದನ ಗ್ರಾಮೀಣ ಪ್ರಶಸ್ತಿ’ ಕುಂಞಿ ಪೂಜಾರಿ ಹಾಗೂ ಬಾಗಿ ದಂಪತಿಗಳಿಗೆ ನೀಡಲಾಯಿತು.ನಂತರ ಗ್ರಾಮದ ವಿವಿಧ ವಲಯಗಳಲ್ಲಿ ಸೇವೆಯನ್ನು ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಮಿಯಾಪದವು ಶಾಲೆಯ ನಿವೃತ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ಭಟ್,ಹಿರಿಯ ಕೃಷಿಕರಾದ ಮಮುಂಜಿ ಹಾಜಿ ಚಿನಾಲ, ಅಣ್ಣು ಮೂಲ್ಯ, ಮೀಂಜ ಪಂಚಾಯತು ಸದಸ್ಯೆ ಸರಸ್ವತಿ,ಕಣ್ಣೂರು ವಿಶ್ವವಿದ್ಯಾನಿಲಯ ಬಿ. ಎ ಕನ್ನಡ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಪಡೆದ ದೀಕ್ಷಿತ, ಅಂತರಾಷ್ಟ್ರೀಯ ತ್ರೋಬಾಲ್ ಆಟಗಾರ ಬಸವರಾಜ್ ಇವರನ್ನು ಸನ್ಮಾನಿಸಲಾಯಿತು. ಗರಿಷ್ಠ ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ನಂತರ ಮಹಾಪೂಜೆ ,ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ 3 ಗಂಟೆಗೆ ಗಣಪತಿಯ ವಿಸರ್ಜನೆಯ ಶೋಭಾಯಾತ್ರೆ ಚಿನಾಲ ಶಾಸ್ತ ಅಯ್ಯಪ್ಪ ಭಜನಾ ಮಂದಿರ, ಕುಳೂರು ದಾರಿಯಾಗಿ ಸಾಗಿ ಪೊಯ್ಯೆಲು ಹೊಳೆಯಲ್ಲಿ ವಿಸರ್ಜನೆ ಮಾಡಲಾಯಿತು.