ಶ್ರೀ ಗೌರಿ ಗಣೇಶ ಯಕ್ಷಗಾನ ಅಧ್ಯಯನ ಕೇಂದ್ರ ಪ್ರತಾಪನಗರ ಮಂಗಲ್ಪಾಡಿಇದರ ವಾರ್ಷಿಕ ಮಹಾ ಸಭೆ

ಶ್ರೀ ಗೌರಿ ಗಣೇಶ ಯಕ್ಷಗಾನ ಅಧ್ಯಯನ ಕೇಂದ್ರ ಪ್ರತಾಪನಗರ ಮಂಗಲ್ಪಾಡಿ ಇದರ ವಾರ್ಷಿಕ ಮಹಾ ಸಭೆಯು ದಿನಾಂಕ 14/09/25 ನೇ ರವಿವಾರ ಗೌರಿ ಗಣೇಶ ಮಂದಿರದಲ್ಲಿ ಶ್ರೀ ಪರಪ್ಪು ಲೋಕನಾಥ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾರ್ಥನೆಯ ಬಳಿಕ. ಶ್ರೀ ಆನಂದ ಮಾಸ್ತರ್ ಸ್ವಾಗತಿಸಿದರು. ಗೌರವ ನಿರ್ದೇಶಕರಾದ ಶ್ರೀ ನಾರಾಯಣ ಮಣಿಯಾಣಿ ಹಾಗೂ ಶ್ರೀ ಗಣೇಶಸುಧಾ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನಿತ್ತರು.

ಯಕ್ಷಗುರು
ಶ್ರೀ ರಾಮ ಸಾಲಿಯಾನ್ ಮಂಗಲ್ಪಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನೂತನ ಚೆಂಡೆ ಮದ್ದಳೆ ಖರೀದಿಸುವರೇ ತೀರ್ಮಾನ ಕೈಗೊಳ್ಳಲಾಯಿತು.ಶ್ರೀಯುತ ಅನಿಲ್ ಕುಮಾರ್ ಕೆ ಚೆಂಡೆ ಮದ್ದಳೆ ಯ ಪ್ರಾಯೋಜಕತ್ವದ ಜವಾಬ್ಧಾರಿ ವಹಿಸಿಕೊಂಡರು. ಮುಂದಿನ ಸಾಲಿನ ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು. ಗೌರವ ನಿರ್ದೇಶಕರಾಗಿ ಶ್ರೀ ನಾರಾಯಣ ಮಣಿಯಾಣಿ, ಶ್ರೀ ಗಣೇಶ್ ಸುಧಾ,ಶ್ರೀ ಗಿರೀಶ್ ರೈ ಅಡ್ಕ,ಶ್ರೀ ಅನಿಲ್ ಕುಮಾರ್ ಕೆ ಆಯ್ಕೆಯಾದರು.ಗೌರವಾಧ್ಯಕ್ಷರಾಗಿ ಶ್ರೀ ಕೃಷ್ಣ ಕುಮಾರ್ ಐಲ, ಶ್ರೀಮತಿ ಅನ್ನಪೂರ್ಣ ರೈ ಕಿದೂರು,ಅಧ್ಯಕ್ಷರಾಗಿ ಶ್ರೀ ಸುರೇಶ್ ಶೆಟ್ಟಿ ಪ್ರತಾಪನಗರ,ಉಪಾಧ್ಯಕ್ಷರಾಗಿ ಉದಯಶಂಕರ ಶೆಟ್ಟಿ, ಲೋಕನಾಥ ಶೆಟ್ಟಿ,ಬಾಲಕೃಷ್ಣ ಬಿ ರೈ,ಕಾರ್ಯದರ್ಶಿಯಾಗಿ ಆನಂದ ಮಾಸ್ತರ್ ಕೆ.

ಜೊತೆ ಕಾರ್ಯದರ್ಶಿಯಾಗಿ ಪ್ರವೀಣ್ ಭಂಡಾರಿ,ಪುಷ್ಪಲತಾ ಕೋಶಾಧಿಕಾರಿಯಾಗಿ ಪ್ರಕಾಶ ಟಿ, ಸಹಾಯಕ ಕೋಶಾಧಿಕಾರಿಯಾಗಿ
ದಯಾನಂದ ಚೆವಾರು,ಬಾಲಕೃಷ್ಣ ಟಿ ರೈ ಸಂಘಟನಾ ಕಾರ್ಯದರ್ಶಿಯಾಗಿ ಬಾಲಕೃಷ್ಣ ನಾಯ್ಕ್ ,ಪುಷ್ಪಲತಾ ಎ,ಲೀಲಾ ಬಿ ರೈ ,ವಿಮಲಾ

ಸಮಿತಿ ಸದಸ್ಯರಾಗಿ ಪೂರ್ಣಿಮಾ,ವಸಂತಿ ಹೊಳ್ಳ,ಜಯಲಕ್ಷ್ಮೀ,ಕುಸುಮ,ಶಶಿಕಲಾ,ಕುಶಲಾ,ಕೇಶವ ಬೇಕೂರು. ಆಯ್ಕೆಗೊಂಡರು .
ಕಾರ್ಯಕ್ರಮದ ಕೊನೆಯಲ್ಲಿ ಪ್ರಕಾಶ್ ಟಿ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!