ಕೊಚ್ಚಿ: ಮಲಯಾಳಂ ಭಾಷೆ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ಶ್ರೀನಿವಾಸನ್(69) ಇಂದು ನಿಧನರಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉದಯಂಪೀರೂರಿನ ತನ್ನ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದಲ್ಲಿ ದಿಡೀರ್ ಏರುಪೇರು ಕಂಡು ಬಂದ ಬಳಿಕ ಅವರನ್ನು ತ್ರಿಪ್ಪುನಿತುರಾದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಶನಿವಾರ ಬೆಳಿಗ್ಗೆ ಅವರು ಮೃತಪಟ್ಟಿದ್ದಾರೆ.
ಕೇರಳದ ತಲಕ್ಕೇರಿ ಬಳಿಯ ಪಟ್ಯಂನಲ್ಲಿ 1956ರ ಏಪ್ರಿಲ್ 6 ರಂದು ಜನಿಸಿದ ಶ್ರೀನಿವಾಸನ್, ಕದಿರೂರಿನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಆ ಬಳಿಕ ಮಟ್ಟನೂರಿನ ಪಿಆರ್‌ಎನ್ ಎಸ್‌ಎಸ್ ಕಾಲೇಜಿನಿಂದ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪಡೆದರು.
1977ರಲ್ಲಿ ಪಿ.ಎ. ಬ್ಯಾಕರ್ ಅವರ ‘ಮಣಿಮುಳಕ್ಕಂ’ ಚಿತ್ರದ ಮೂಲಕ ಶ್ರೀನಿವಾಸನ್ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು ಮಲಯಾಳಂ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದರು. ಸುಮಾರು ಐದು ದಶಕಗಳ ಕಾಲ ಅವರು 225ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದಾರೆ.
ನಟ, ನಿರ್ಮಾಪಕ, ಬರಹಗಾರ ಮತ್ತು ಚಲನಚಿತ್ರ ನಿರ್ಮಾಪಕರಾಗಿ ಶ್ರೀನಿವಾಸನ್ ಅವರ ಕೊಡುಗೆ ಆಧುನಿಕ ಮಲಯಾಳಂ ಸಿನಿಮಾವನ್ನು ರೂಪಿಸಲು ಸಹಾಯ ಮಾಡಿದೆ.ಇವರ ಅಗಲಿಕೆಗೆ ಮಾಲಿವುಡ್ ಚಿತ್ರರಂಗ ಸಹಿತ ಗಣ್ಯರು ಕಂಬನಿ ಮಿಡಿದ್ದಿದಾರೆ .
Just spent a little time on 70bet2. It’s a pretty chilled-out vibe. If you are into the betting scene, you should visit our website now 70bet2! See whether you can win!