ಕನ್ನಡ ಭವನದ “ರಜತ ಸಂಭ್ರಮ”ಸಿದ್ದತಾ ಸಭೆ ಸಂಪನ್ನ

ಕಾಸರಗೋಡು: ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಇದರ 25 ನೇ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಸುವರೇ ತೀರ್ಮಾನಿಸಿದ ಪ್ರಯುಕ್ತ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಬಯಲು ರಂಗ ಮಂಟಪದಲ್ಲಿ ಜನವರಿ 18.2026.ಭಾನುವಾರ ಬೆಳಿಗ್ಗೆ 7.30 ರಿಂದ ತಡ ರಾತ್ರಿವರೆ ವಿವಿಧ ಕನ್ನಡ ಕಾರ್ಯಕ್ರಮಗಳೊಂದಿಗೆ ನಡೆಸುವರೇ ತೀರ್ಮಾನಿಸಲಾಯಿತು.


ಈ ಪ್ರಯುಕ್ತ ನಡೆದ ಸಿದ್ದತಾ ಸಭೆಯು 5.01.2026 ಸಂಜೆ ಕನ್ನಡ ಭವನ ಪದಾಧಿಕಾರಿಗಳ ಸಭೆ ಕನ್ನಡ ಭವನದಲ್ಲಿ ನಿರ್ದೇಶಕರಾದ ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳರ ಅದ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ತೆಗೆದ ಪ್ರಮುಖ ನಿರ್ಣಯಗಳಲ್ಲಿ “ಕರ್ನಾಟಕದ ವಿವಿಧ ಕನ್ನಡ ಭವನದ ಘಟಕಗಳ ಅಪೇಕ್ಷೆಯಂತೆ ಆಯಾ ಜಿಲ್ಲೆಯ ಗಣ್ಯ ಸಾಹಿತಿ, ಕನ್ನಡ ದುರೀಣ ರನ್ನು ಕನ್ನಡ ಭವನದ ವಿವಿಧ ಪ್ರಶಸ್ತಿಗಳ ಮೂಲಕ ಗೌರವಿಸಲು ತೀರ್ಮಾನಿಸಲಾಯಿತು. ಈ ಮೊದಲು ತೀರ್ಮಾನಿಸಿದ 101 ಸಂಖ್ಯೆಯನ್ನು 150ಕ್ಕೆ ವಿಸ್ತರಿಸಲಾಯಿತು.
ನಮ್ಮ ಕನ್ನಡ ಸಂಸ್ಕೃತಿ ಪ್ರಕಾರ ಬೆಳಿಗ್ಗೆ 7.30 ರಿಂದ 9.30 ತನಕ ವಿಶ್ವ ಕರ್ಮ ಭಜನಾ ಸಂಘ 25ಮಂದಿ ಭಜಕರಿಂದ ಭಜನೆ. 9.30 ಯಿಂದ ಕನ್ನಡ ಭುವನೇಶ್ವರಿ ಬಾವಚಿತ್ರ ಕ್ಕೆ ಹಾರಾರ್ಪಣೆ, ಕನ್ನಡ ಧ್ವಜಾರೋಹಣ,”ಶ್ರೀ ಕೃಷ್ಣ ದೇವರಾಯ “ಭಾವಚಿತ್ರಕ್ಕೆ ಹಾರಾರ್ಪಣೆ, ಕೃಷ್ಣ ರಾಜ ವೊಡೆಯರ್ ಭಾವಚಿತ್ರಕ್ಕೆ ಹಾರಾರ್ಪಣೆ, ದೀಪ ಬೆಳಗಿಸಿ ಉದ್ಘಾಟನೆ, 10.30 ಯಿಂದ ವಿವಿಧ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ, ನಡು ನಡುವೆ ಪ್ರತ್ಯೇಕ ವೇದಿಕೆಯಲ್ಲಿ ನ್ರಿತ್ಯ., ಗಾಯನ ನಡೆಯಲಿದೆ. ಕವಿಗೋಷ್ಠಿ, 3.30 ರಿಂದ ಸಮಾರೋಪ ಸಮಾರಂಭ ದಲ್ಲಿ ಕನ್ನಡ ಭವನದ ಪದಾಧಿಕಾರಿಗಳಿಗೆ, ಅಭಿಮಾನಿಗಳಿಗೆ “ರಜತ ಸಂಭ್ರಮ ಗೌರವ ಸನ್ಮಾನ “ನಡೆಯಲಿದೆ. ತದನಂತರ “ರಂಗ ಸಿರಿ ವೇದಿಕೆ ಬಾಯಾರು “ಸತ್ಯನಾರಾಯಣ ಪದಕಣ್ಣಾಯ ನೆತ್ರಿತ್ವದ “ಯಕ್ಷಗಾನ ಬಯಲಾಟ “ನಡೆಯಲಿದೆ. ನಂತರ ಕರ್ನಾಟಕ ದಿಂದ ಬಂದ ಕಲಾವಿದರಿಂದ ಕಲಾ ಪ್ರದರ್ಶನ, ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ವಿವಿಧ ಉಪಸಮಿತಿಗಳನ್ನು ರೂಪಕರಿಸಲಾಯಿತು. ಡಾ. ವೆಂಕಟ್ರಮಣ ಹೊಳ್ಳ, ರವಿ ಕೇಳುಗುಡ್ಡೆ, ನವೀನ್ ನಾಯ್ಕ್, ಅರಿಬೈಲ್ ಗೋಪಾಲ್ ಶೆಟ್ಟಿ ಆಹಾರ ಸಮಿತಿ, ವಸಂತ ಕೆರೆಮನೆ, ಪ್ರದೀಪ್ ಬೇಕಲ್, ವಿರಾಜ್ ಅಡೂರ್ ಪ್ರಶಸ್ತಿ ಪರಿಕರ ಸಮಿತಿ, ಮುರಳಿ ಪಾರೆಕಟ್ಟೆ, ಪ್ರದೀಪ್ ನಾಯ್ಕ್ ನಾಗರಕಟ್ಟೆ, ರಾಜೇಶ್ ಕೋಟೆಕಣಿ -ಧ್ವನಿ ಬೆಳಕು, ವೇದಿಕೆ, ವಾಹನ ನಿಲುಗಡೆ.
ಸ್ವಾಗತ, ಅತಿಥಿ ಸತ್ಕಾರ ಸಮಿತಿ… ಪ್ರಿನ್ಸಿಪಾಲ್ ರಾಜೇಶ್ ಚಂದ್ರ ಕೆ. ಪಿ. ಉಮೇಶ್ ರಾವ್ ಕುಂಬಳೆ, ರೇಖಾ ಸುದೇಶ್ ರಾವ್, ಉಷಾ ಕಿರಣ್, ಪ್ರಕಾಶ್ ಚಂದ್ರ ಕೆ. ಪಿ.
ವಸತಿ ಸೌಕರ್ಯ -ವಾಹನ ಸೌಕರ್ಯ.. ನವೀನ್ ಚಂದ್ರ ಅನಂಗೂರ್, ಮೋಹನ್ ದಾಸ್ ಕೊರಕೋಡ್, ಉದಯ ನಾಗರಕಟ್ಟೆ, ಕೇಶವ ನಾಗರಕಟ್ಟೆ, ಆರ್ಥಿಕ ಸಮಿತಿ ಸಂಚಾಲಕರಾಗಿ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್. ನಿರ್ವಹಣೆಯ ಕಾರ್ಯಭಾರ, ರವಿ ನಾಯ್ಕಪು, ವಿಶಾಲಾಕ್ಷ ಪುತ್ರಕಳ, ವಿರಾಜ್ ಅಡೂರ್.ರನ್ನು ಆರಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಭವನ-25.ವರ್ಷದ ಲಭ್ಯ ಕಾರ್ಯಕ್ರಮಗಳ ನ್ನು ಅಳವಡಿಸಿ “ಸ್ಮರಣ ಸಂಚಿಕೆ”ಒಂದನ್ನು ಹೊರತರಲು, ವಿರಾಜ್ ಅಡೂರ್ ಹಾಗೂ ಪ್ರದೀಪ್ ಬೇಕಲ್ ರನ್ನು ಆರಿಸಲಾಯಿತು. ಸಂದ್ಯಾ ರಾಣಿ ಟೀಚರ್ ಸ್ವಾಗತಿಸಿ, ವಸಂತ್ ಕೆರೆಮನೆ ವಂದಿಸಿದರು, ಪ್ರದೀಪ್ ಬೇಕಲ್ ಕಾರ್ಯಕ್ರಮ ನಿರ್ವಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!