ಕುಂಬಳೆ ಟೋಲ್ ಪ್ಲಾಝ: ರಹಸ್ಯ ಆರಂಭಕ್ಕೆ ವಿರೋಧ, ಹೋರಾಟ ತೀವ್ರಗೊಳ್ಳುವ ಸೂಚನೆ

ಮಂಜೇಶ್ವರ : ಸೋಮವಾರದಿಂದ ಟೋಲ್ ಪ್ಲಾಝ ಕಾರ್ಯರಂಭಗೊಳ್ಳುವುದೆಂಬ ರಹಸ್ಯ ಮಾಹಿತಿ ಸಿಕ್ಕಿದ ಬೆನ್ನಲ್ಲೇ ಶಾಸಕ ಎಕೆಎಂ ಅಶ್ರಫ್ ನೇತೃತ್ವದಲ್ಲಿ ಕ್ರಿಯಾ ಸಮಿತಿ ಕಾರ್ಯಕರ್ತರು ಕುಂಬಳೆ ಗ್ರಾ. ಪಂ. ಕಚೇರಿಯಲ್ಲಿ ತುರ್ತು ಸಭೆ ಸೇರಿದರು. ಬಳಿಕ ಟೋಲ್ ಪ್ಲಾಝ ಇರುವಲ್ಲಿಗೆ ತೆರಳಿ ಸೋಮವಾರ ಕಾರ್ಯಾರಂಭಗೊಂಡರೆ ಯಾವುದೇ ಬೆಲೆತೆತ್ತಾದರೂ ತಡೆದು ಪ್ರತಿಭಟಿಸುವುದಾಗಿ ಮುನ್ನೆಚ್ಚರಿಕೆ ನೀಡಿದರು.

ಕುಂಬಳೆ ಗ್ರಾ. ಪಂ. ಅಧ್ಯಕ್ಷ ವಿ. ಪಿ. ಅಬ್ದುಲ್ ಖಾದ‌ರ್, ಕಾಸರಗೋಡು ಬ್ಲಾಕ್ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಅಝೀಝ್ ಕಳತ್ತೂರು, ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡು ಸಮಾಲೋಚನೆ ನಡೆಸಿದರು.

ಕುಂಬಳೆಯಲ್ಲಿ ಸ್ಥಾಪಿಸಿದ ಟೋಲ್ ಪ್ಲಾಝಕ್ಕೆ ನಾಗರಿಕರ ವಿರೋಧ ಇರುವುದರಿಂದ ಹೆದ್ದಾರಿ ಪ್ರಾಧಿಕಾರ ರಹಸ್ಯವಾಗಿ ಟೋಲ್ ಶುಲ್ಕ ವಸೂಲಾತಿ ಆರಂಭಿಸಲು ಮುಂದಾಗಿದೆ ಎಂದು ಕ್ರಿಯಾಸಮಿತಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಹೋರಾಟ ವಿಫುಲೀಕರಿಸಲಾಗುವುದೆಂದು ಕ್ರಿಯಾಸಮಿತಿ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!