ಗ್ರೈಂಡರ್‌ಗೆ ಶಾಲು ಸಿಲುಕಿ ಯುವತಿ ದಾರುಣ ಸಾವು

ಮಂಜೇಶ್ವರ: ಇಲ್ಲಿಗೆ ಸಮೀಪದ ವರ್ಕಾಡಿಯಲ್ಲಿ ಅಡುಗೆ ತಯಾರಿ ಮಧ್ಯೆ ಗ್ರೈಂಡರ್ ಗೆ ಶಾಲು ಸಿಲುಕಿ ಯುವತಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ್ದಾಳೆ.ವರ್ಕಾಡಿ ತೌಡುಗೋಳಿ ಮದಕ್ಕೆ ಕಲ್ಕಿಂಜದ ಅಬ್ದುಲ್ ಖಾದರ್ ಎಂಬವರ ಪತ್ನಿ ಮೈಮೂನ (40) ಸಾವನ್ನಪ್ಪಿದ ದುರ್ದೈವಿ.

ಮನೆಯಲ್ಲಿ ಅಡುಗೆ ತಯಾರಿಸಲು ಗ್ರೈಂಡರ್‌ನಲ್ಲಿ ಮಸಾಲೆ ಹುಡಿ ಮಾಡುತ್ತಿದ್ದಂತೆ ಶಾಲು ಅದರಲ್ಲಿ ಸಿಲುಕಿ ಈ ದುರ್ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡ ಮೈಮೂನರನ್ನು ಸಂಬಂಧಿಕರು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

SHARE
Loading spinner

Leave a Reply

Your email address will not be published. Required fields are marked *

error: Content is protected !!