ಉಪ್ಪಳ: ಬೇಕೂರು ಬಳಿಯ ಬೆಳ್ಳಾರು ನಿವಾಸಿ ವಾಸ್ತು ಶಿಲ್ಪಿ ಧರ್ಮೇಂದ್ರ ಆಚಾರ್ಯ [78] ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ರೋಹಿಣಿ, ಮಕ್ಕಳಾದ ಕಿರಣ್ ಆಚಾರ್ಯ, ಯತೀಶ್ ಆಚಾರ್ಯ, ಪವಿತ್ರ, ಸೊಸೆಯಂದಿರಾದ ಶ್ವೇತ, ದೀಕ್ಷಿತ, ಅಳಿಯ ಪಾಂಡುರoಗ ಆಚಾರ್ಯ, ಸಹೋದರಿ ಸೀತಾ, ಸಹೋದರ ಲಕ್ಷಣ ಆಚಾರ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸoಸ್ಕಾರ ಸಂಜೆ ಮನೆ ಪರಿಸರದಲ್ಲಿ ನಡೆಯಿತು.