ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ ₹30 ಲಕ್ಷ ನಗದು ವಶ: KSRTC ಬಸ್‌ನಿಂದ ದಾಖಲೆರಹಿತ ಹಣ ಪತ್ತೆ, ವ್ಯಕ್ತಿ ಕಸ್ಟಡಿಗೆ

ಮಂಜೇಶ್ವರ:ದಿನಾಂಕ 22.01.2026 ರಂದು ಬೆಳಿಗ್ಗೆ 9.30 ಗಂಟೆಗೆ, ನಿಯಮಿತ ವಾಹನ ಪರಿಶೀಲನೆಯ ಸಂದರ್ಭದಲ್ಲಿ ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ, ತಲಪಾಡಿ ಯಿಂದ ಕಾಸರಗೋಡು ಕಡೆಗೆ ಬರುತ್ತಿದ್ದ KSRTC ಬಸ್ನಲ್ಲಿ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ ₹30,00,000 ನಗದು ಹಣವನ್ನು ಎಕ್ಸೈಸ್ ಅಧಿಕಾರಿಗಳು ಪತ್ತೆಹಚ್ಚಿದರು.

ಈ ಸಂಬಂಧ ಮಲಪ್ಪುರಂ ಜಿಲ್ಲೆ, ಪೆರಿಂಥಲ್‌ಮಣ್ಣ ತಾಲ್ಲೂಕು, ವಡಕ್ಕಂಕಾರ ಗ್ರಾಮ, ಮಂಕಡ ವಡಕ್ಕಂಕಾರ ದೇಶ, ಏರುಂಬತ್ ಮನೆ ನಿವಾಸಿ **ಅಬ್ದುಲ್ ರಹ್ಮಾನ್ ಅವರ ಪುತ್ರ ಹಂಸ (64 ) ಎಂಬ ವ್ಯಕ್ತಿಯನ್ನು ಎಕ್ಸೈಸ್ ಸರ್ಕಲ್ ಇನ್‌ಸ್ಪೆಕ್ಟರ್ ಶಿಜಿಲ್ ಕುಮಾರ್ ಹಾಗೂ ಅವರ ತಂಡವು ಕಸ್ಟಡಿಗೆ ಪಡೆದಿದೆ.

ಈ ಕಾರ್ಯಾಚರಣೆಯಲ್ಲಿ ಎಕ್ಸೈಸ್ ಇನ್‌ಸ್ಪೆಕ್ಟರ್ ಆದರ್ಶ್ ಜಿ, ಸಹಾಯಕ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಜನಾರ್ದನನ್ ಕೆ, ಪ್ರಿವೆಂಟಿವ್ ಆಫೀಸರ್ (ಗ್ರೇಡ್) ನೌಶಾದ್ ಕೆ, ಸಿವಿಲ್ ಎಕ್ಸೈಸ್ ಅಧಿಕಾರಿಗಳಾದ ಪ್ರಶಾಂತ್ ಕುಮಾರ್ ಹಾಗೂ ರತೀಶ್ ಓ.ಪಿ. ಅವರು ಭಾಗವಹಿಸಿದ್ದರು.ಪತ್ತೆಯಾದ ವ್ಯಕ್ತಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!