ಮಂಜೇಶ್ವರ : ಮದ್ರಸದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಪೊಸೋಟು ಸತ್ಯಡ್ಕ ಮುತ್ತುಕುಂಜ ಹೌಸ್‌ನ ಅಬೂಬಕ್ಕರ್‌ರ ಪುತ್ರ ಯೂಸಫ್ ಖಲಂದರ್ ಬಾಬ (14) ನಾಪತ್ತೆ ಯಾದ ವಿದ್ಯಾರ್ಥಿಯಾಗಿದ್ದಾನೆ.
ಕಳೆದ ಎರಡು ದಿವಸದಿಂದ ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೋದ ಬಳಿಕ ಪುತ್ರ ಮರಳಿ ಬಂದಿಲ್ಲವೆಂದು ತಿಳಿಸಿ ಅಬೂ ಬಕ್ಕರ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿಯ ಮೊಬೈಲ್ ಫೋನ್ ಮನೆಯಲ್ಲೇ ಇದೆಯೆಂದೂ ದೂರಿನಲ್ಲಿ ತಿಳಿಸಲಾಗಿದೆ.