ಮಂಜೇಶ್ವರ: ಉಪ್ಪಳ–ಬದಿಯಡ್ಕದಲ್ಲಿ ಕಳ್ಳತನ ಅಟ್ಟಹಾಸ, ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿ

ಮಂಜೇಶ್ವರ: ಕುಂಬಳೆ ಕಳವು ಪ್ರಕರಣದ ತನಿಖೆ ಮುಂದುವರಿಯುತ್ತಿರುವ ಮಧ್ಯೆ ಉಪ್ಪಳ ಹಾಗೂ ಬದಿಯಡ್ಕದಲ್ಲಿ ಕಳ್ಳರು ನಗ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಉಪ್ಪಳ ಬಪ್ಪಾಯಿತೊಟ್ಟಿಯ ಅಹಮ್ಮದ್ ಮಂಜಿಲ್‌ನ ರುಕ್ಸಾನ ಅವರ ಮನೆಯಿಂದ 23.5 ಪವನ್ ಚಿನ್ನಾಭರಣಗಳು ಕಳವಿಗೀಡಾಗಿದೆ. ಜನವರಿ 15ರಿಂದ 21ರ ನಡುವೆ ಕಳವು ನಡೆದಿದ್ದು, ಮಗಳ ಮದುವೆ ದಿನ ಈ ವಿಷಯ ಗೊತ್ತಾಗಿದೆ. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.
ಬದಿಯಡ್ಕ ಕನ್ಯಪ್ಪಾಡಿಯ ನಿಲೋಫರ್ ಮಹಲ್‌ನಲ್ಲಿ ಬೀಗ ಮುರಿದು ಒಳನುಗ್ಗಿದ ಕಳ್ಳರು 8,300 ರೂ. ನಗದು ಕಳವು ಮಾಡಿದ್ದಾರೆ. ಫಸೀಲ ಅವರ ದೂರಿನಂತೆ ಬದಿಯಡ್ಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!