ಮಂಜೇಶ್ವರ ಗ್ರಾಮ ಪಂಚಾಯತ್ 2025–26 ಯೋಜನೆ: ಹಿರಿಯ ನಾಗರಿಕರಿಗಾಗಿ ಮೆಗಾ ವೈದ್ಯಕೀಯ ಶಿಬಿರ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್‌ನ 2025–26 ವಾರ್ಷಿಕ ಯೋಜನೆಯ ಭಾಗವಾಗಿ ಗ್ರಾಮ ಪಂಚಾಯತ್ ಹಾಗೂ ಮಂಜೇಶ್ವರ ಬ್ಲಾಕ್ ಫ್ಯಾಮಿಲಿ ಹೆಲ್ತ್ ಸೆಂಟರ್ ಸಂಯುಕ್ತವಾಗಿ ಹಿರಿಯ ನಾಗರಿಕರಿಗಾಗಿ ಮೆಗಾ ವೈದ್ಯಕೀಯ ಶಿಬಿರವನ್ನು ಆಯೋಜಿಸಿತು. ಜನವರಿ 31ರಂದು ಮಂಜೇಶ್ವರ ಎ.ಕೆ. ಗಾರ್ಡನ್ಸ್‌ನಲ್ಲಿ ನಡೆದ ಈ ಶಿಬಿರಕ್ಕೆ ಪ್ರದೇಶದ ಹಿರಿಯ ನಾಗರಿಕರಿಂದ ಭಾರಿ ಸ್ಪಂದನೆ ಲಭಿಸಿತು.

ಬ್ಲಾಕ್ ಫ್ಯಾಮಿಲಿ ಹೆಲ್ತ್ ಸೆಂಟರ್‌ನ ಹೆಲ್ತ್ ಇನ್ಸ್‌ಪೆಕ್ಟರ್ ಶ್ರೀ ದಿಲೀಪ್ ಸ್ವಾಗತ ಭಾಷಣ ಮಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಬಶೀರ್ ಕನಿಲ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತ್ ಅಧ್ಯಕ್ಷ ಶ್ರೀ ಸೈಫುಲ್ಲ ತಂಗಳು ಶಿಬಿರವನ್ನು ಉದ್ಘಾಟಿಸಿದರು. ಹಿರಿಯ ನಾಗರಿಕರ ಆರೋಗ್ಯದ ಮಹತ್ವ ಕುರಿತು ಆರೋಗ್ಯ ವಿಷಯಾವತರಣೆಯನ್ನು ಡಾ. ಪ್ರಭಾಕರ್ ರೈ (BFHC ಮಂಜೇಶ್ವರ) ನಡೆಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಫಾತಿಮಾ ಸೌರಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ಅಬ್ದುಲ್ ರಹಿಮಾನ್, ಕಲ್ಯಾಣ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಸರೀನಾ ಬಾನು, ಅಭಿವೃದ್ಧಿ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಫರ್ಹಾನ ಅಬ್ದುಲ್ ರಹಿಮಾನ್ ಅವರು ಶುಭಾಶಯಗಳನ್ನು ಅರ್ಪಿಸಿದರು.

ಮೆಂಬರ್‌ಗಳಾದ ಮುಕ್ತಾರ್ ಎ, ಶ್ರೀ ಇಲ್ಯಾಸ್ ತೂಮಿನಾಡು, ಶ್ರೀಮತಿ ಹಸೀನಾ, ಶ್ರೀಮತಿ ಆಶಾಲತಾ ಪಿ.ವಿ., ಶ್ರೀ ಮೂಸ ಪಿ.ಎ., ಶ್ರೀ ಅಬೂಬಕ್ಕರ್ ಸಿದ್ದೀಖ್, ಶ್ರೀ ಮೊಹಮ್ಮದ್ ಶರೀಫ್ ಹಾಗೂ ಶ್ರೀಮತಿ ಬೇಬಿಲತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಬಿರದ ಅಂಗವಾಗಿ ಹಿರಿಯ ನಾಗರಿಕರಿಗೆ ಸಾಮಾನ್ಯ ಆರೋಗ್ಯ ಪರೀಕ್ಷೆ, ರಕ್ತದೊತ್ತಡ ಹಾಗೂ ರಕ್ತದ ಸಕ್ಕರೆ ಪರೀಕ್ಷೆ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳು ಒದಗಿಸಲಾಯಿತು. ಹಿರಿಯ ನಾಗರಿಕರ ಆರೋಗ್ಯ ಸಂರಕ್ಷಣೆಗೆ ಬಹಳ ಉಪಯುಕ್ತವಾದ ಈ ಶಿಬಿರಕ್ಕೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!