ಪೈವಳಿಕೆ : ಕೇರಳ ಬಜೆಟ್ 2026 ಮಂಜೇಶ್ವರ ಕ್ಕೆ ಅತ್ಯಂತ ನಿರಾಶೆದಾಯಕ ಬಜೆಟ್, ಮಂಜೇಶ್ವರ ವಿ ಸಾ ಕ್ಷೇತ್ರದ ಯಾವುದೇ ಅಭಿವೃದ್ಧಿ ಗೆಬೇಕಾಗಿ ನಯ ಪೈಸೆ ಮೀಸಲು ಇಟ್ಟಿಲ್ಲ. ಇದು ಕೇರಳ ರಾಜ್ಯ ಆಡಳಿತ ಮಾಡುವ ಎಡರಂಗ ಹಾಗೂ ಮಂಜೇಶ್ವರ ಶಾಸಕರ ಬೇಜವಾಬ್ದಾರಿ ಕಾರ್ಯ ವೈಖರಿ ಗೆ ಸ್ಪಷ್ಟ ನಿದರ್ಶನ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಆದರ್ಶ ಬಿ ಎಂ ಆರೋಪಿಸಿದರು.
ಖಾಸಗಿ ಕಟ್ಟಡ ಮೂರನೇ ಮಹಡಿ ಯಲ್ಲಿರುವ ತಾಲೂಕು ಕಚೇರಿಗೆ ಒಂದು ಸ್ವಂತ ಕಟ್ಟಡ ನಿರ್ಮಾಣಕ್ಕೆ ಮಂಜೇಶ್ವರ ಶಾಸಕ ಪ್ರಯತಿಸಿಲ್ಲ.
ತುಳು ಅಕಾಡೆಮಿ, ಗೋವಿಂದ ಪೈ ಸ್ಮಾರಕ ಅಭಿವೃದ್ಧಿಗೆ, ಉದ್ಯೋಗ ಸೃಷ್ಟಿ ಗೆ, ಕೈಗಾರಿಕಾ ಅಭಿವೃದ್ಧಿ ಗೆ, ಆದುನಿಕರಣಕ್ಕೆ, ಕೃಷಿಕರಿಗೆ, ಪೈವಳಿಕೆ ಯಲ್ಲಿ ಪೊಲೀಸ್ ಠಾಣೆ ನಿರ್ಮಾಣಕ್ಕೆ, ಮೈದಾನ ಅಭಿವೃದ್ಧಿ ಗೆ, ನಯ ಪೈಸೆ ನೀಡಿಲ್ಲ ಮಾತ್ರವಲ್ಲ ಯಾವುದೇ ಕನ್ನಡ ಶಾಲೆ ಗಳ ಅಭಿವೃದ್ಧಿ ಹಾಗೂ ಉನ್ನತಿ ಕಾರಣಕ್ಕೆ, ನೂತನ ಕೋರ್ಸ್ ಗಳಿಗೆ ಯಾವುದೇ ಯೋಜನೆ ತರದ ಮಂಜೇಶ್ವರ ಶಾಸಕರು ಮಾಡಬೇಕಾದ ಕೆಲಸ ಮಾಡದೇ ರಸ್ತೆಯಲ್ಲಿ ನಿಂತು ಮಾಡುವ ಬೀದಿ ನಾಟಕ ಮಾತ್ರ ಮಾಡುತಿದ್ದರೆ ಎಂದು ಬಿಜೆಪಿ ಆರೋಪಿಸಿದೆ.
ಮಂಜೇಶ್ವರ ಅಭಿವೃದ್ಧಿ ಗೆ ಯಾವುದೇ ಒಂದು ಪ್ಯಾಕೇಜ್ ಕೂಡ ಅನುಮೋದನೆ ಮಾಡಲಾಗದ ನಯ ಪೈಸೆ ಮೀಸಲಿಡದ ಮಂಜೇಶ್ವರ ಶಾಸಕಕರ ಬೇಜವಾಬ್ದಾರಿತನಕ್ಕೆ ಮಂಜೇಶ್ವರ ಜನತೆ ತಕ್ಕ ಉತ್ತರ ನೀಡಬೇಕಿದೆ.
ಮಲಯಾಳಂ ಕಡ್ಡಾಯವಾಗಿ ಮಾಡಿರುವ ಸರಕಾರದ ವಿರುದ್ಧ ಮಂಜೇಶ್ವರ ಶಾಸಕ ತನಿಯಮ ಸಭೆ ಯಲ್ಲಿ ಮಾತೇ ಆಡಿಲ್ಲ ಎಂದು ಆದರ್ಶ ಬಿ ಎಂ ಶಾಸಕರ ಕ್ರಮವನ್ನು ಖಂಡಿಸಿದರು.