ಕುಂಬಳೆ ಆರಿಕ್ಕಾಡಿಯಲ್ಲಿ ಶ್ರೀಉಳ್ಳಾಲ್ತಿ ನಾಗಬ್ರಹ್ಮ 18 ದೈವಸ್ಥಾನದ ದೈವದ ಪಾತ್ರಿ–ಕಾನಾ೯ವರ ಒಕ್ಕೂಟದ 2ನೇ ವಾರ್ಷಿಕೋತ್ಸವ:

ಶ್ರೀಉಳ್ಳಾಲ್ತಿ ನಾಗಬ್ರಹ್ಮ18 ದೈವಸ್ಥಾನದ ದೈವದ ಪಾತ್ರಿ ಮತ್ತು ಕಾನಾ೯ವರ ಒಕ್ಕೂಟ (ರಿ) ಇದರ 2ನೇ ವರ್ಷದ ವಾರ್ಷಿಕೋತ್ಸವವು ನಿನ್ನೆ ಕುಂಬಳೆಯ ಆರಿಕ್ಕಾಡಿ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀ ಶಂಕರ ಅಡ್ಕ ವಹಿಸಿದ್ದರು. ಪ್ರಧಾನ ಭಾಷಣಗಾರರಾದ ಶ್ರೀ ನವೀನ್ ಸೂರಿಂಜೆ ,ಶ್ರೀ ಹರೀಶ್ ಶೆಟ್ಟಿ ಮಾಡ,ಶ್ರೀ ಸದಾನಂದ ಕಾರ್ನವರು,ಶ್ರೀ ಸುರೇಶ ದೈವದ ಪಾತ್ರಿ,ಶ್ರೀ ಆನಂದ ದೈವದ ಪಾತ್ರಿ,ಶ್ರಿ ಬಾಬು ಕುಬನೂರು,ಶ್ರೀ ನವೀನ್ ಮಂಗಳೂರು,ಸಮಾಜದ ಕೇಂದ್ರ ಸಮಿತಿಯ ಅಧ್ಯಕ್ಷ ತುಳಸಿದಾಸ್ ,ಶ್ರೀವಿಜಯ ಪಂಡಿತ್, ಶ್ರೀಮತಿ ಚಂಚಲಾಕ್ಷಿ,ಶ್ರೀಮತಿ ಸುಜಾತ ಮಂಜೇಶ್ವರ,ಹಾಗೂ 18 ದೈವಸ್ಥಾನದ ಹಿರಿಯವರು ಮತ್ತು ಸಮಾಜದ ಗಣ್ಯ ವ್ಯಕ್ತಿಗಳು ಭಾಗವಹಿಸಿದರು.

ಶ್ರೀಭಾಸ್ಕರನ್ ಕಾರ್ನವರು ಸ್ವಾಗತಿಸಿ,ಶ್ರೀ ವಾಮನ ದೈವದ ಪಾತ್ರಿ ದನ್ಯವಾದವಿತ್ತರು, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀಗಣೇಶ್ ಪ್ರಸ್ತಾವಿಕ ಭಾಷಣಗೈದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!