ಶ್ರೀ ವಿದ್ಯಾವರ್ಧಕ ಶಾಲೆ–ಮಾಸ್ಟರ್ಸ್ ಕ್ಲಬ್ ನೇತೃತ್ವದಲ್ಲಿ ಮೀಯಪದವಿನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ :

ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆ, ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆ ಮೀಯಪದವು,ಮಾಸ್ಟರ್ಸ್ ಆರ್ಟ್ಸ್ &ಸ್ಪೋರ್ಟ್ಸ್ ಕ್ಲಬ್,(ರಿ)ವಿಕಾಸ ಮೀಯಪದವು ಇದರ ನೇತೃತ್ವದಲ್ಲಿ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠo ಚಾರಿಟೇಬಲ್ ಟ್ರಸ್ಟ್ ಕೊಂಡೆವೂರು ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ,ಡಾ. ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಒನ್ ಸೈಟ್ ಎಸ್ಸಿ ಲೋರ್ ಲಕ್ಸೋಟಿಕ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆ ಮೀಯದವಿನಲ್ಲಿ ಜರುಗಿತು.

ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀವರ್ಚನಗಳನ್ನಿತ್ತರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ವಹಿಸಿದ್ದರು.ಪ್ರಸಾದ್ ನೇತ್ರಾಲಯದ ವೈದ್ಯಾಧಿಕಾರಿ ಡಾ.ಪ್ರೇಮ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸ್ತುತ ಸಮಾಜದಲ್ಲಿ ಆಬಾಲವೃದ್ಧರಾಗಿ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಕಣ್ಣಿನ ಸಮಸ್ಯೆ ಮುಖ್ಯವಾಗಿದ್ದು ಅತಿಯಾದ ಮೊಬೈಲ್ ಬಳಕೆ ಇದಕ್ಕೆ ಪ್ರತ್ಯಕ್ಷ ಕಾರಣವಾಗುತ್ತಿದೆ. ಕಣ್ಣಿನ ಮಹತ್ವವನ್ನರಿತು ವ್ಯಕ್ತಿ ನೇತ್ರದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀಧರ ರಾವ್ ಆರ್ ಯಂ ನಿವೃತ್ತ ಮುಖ್ಯ ಶಿಕ್ಷಕರು ಶ್ರೀ ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆ ಮೀಯಪದವು,ಕೆ.ವಿ ರಾಧಾಕೃಷ್ಣ ಭಟ್ ಅಧ್ಯಕ್ಷರು ಮಾಸ್ಟರ್ಸ್&ಸ್ಪೋರ್ಟ್ಸ್ ಕ್ಲಬ್ ಮೀಯಪದವು ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.ಶಾಲಾ ಪ್ರಭಾರ ಪಾಂಶುಪಾಲ ರವಿಲೋಚನ ಚೆಕ್ಕೆಮನೆ,ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮೃದುಲಾ ಕೆ ಯಂ ,ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅರವಿಂದಾಕ್ಷ ಭಂಡಾರಿ,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಹೊನ್ನಕಟ್ಟೆ,ಮಾತೃ ಮಂಡಳಿ ಅಧ್ಯಕ್ಷೆ ನಬೀಸತುಲ್ ಮಿಸ್ರಿಯ,ಕೃಷ್ಣ ಪ್ರಸನ್ನ ಮಿತ್ತಾಳ ಕಾರ್ಯಕ್ರಮಕ್ಕೆ ಶುಭಕೋರಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಉತ್ಸುಕತೆಯಿಂದ ಪಾಲ್ಗೊಂಡು ಶಿಬಿರದ ಫಲಾನುಭವಿಗಳಾದರು.ಕಾರ್ಯಕ್ರಮವನ್ನು ಮುಖ್ಯಶಿಕ್ಷಕರಾದ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ, ಮಾಸ್ಟರ್ಸ್ ಕ್ಲಬ್ ನ ಗೌರವಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ವಂದಿಸಿದರು.ಕಾರ್ಯಕ್ರಮವನ್ನು ಅಧ್ಯಾಪಕರಾದ ಕಿರಣ್ ಕೆ ಎಸ್ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!