ಕುಂಬಳೆಯಲ್ಲಿ ಎಂಡಿಎಂಎ ಮಾದಕವಸ್ತು ವಶ : ಯುವಕ ಬಂಧನ

ಕುಂಬಳೆ:ಸೀತಾಂಗೋಳಿ ರಾಜೀವ್ ಕಾಲೋನಿಯ ನಿವಾಸಿ ಇಚ್ಚಾದು ಯಾನೆ ಅಬ್ದುಲ್ ನಿಸಾರ್ (24) ಅವರನ್ನು 2.22 ಗ್ರಾಂ ಎಂಡಿಎಂಎ (MDMA) ಸಹಿತವಾಗಿ ಕುಂಬಳೆ ಪೊಲೀಸ್ ಠಾಣೆಯ ಎಸ್‌ಐ ಅನಂತಕೃಷ್ಣನ್ ಅವರು ಬಂಧಿಸಿದ್ದಾರೆ.ಆರೋಪಿಯ ಪ್ಯಾಂಟ್ ಜೇಬಿನಲ್ಲಿದ್ದ ಸಿಗರೇಟು ಕೇಸ್ ಒಳಗಿನ ಪಾಲಿಥಿನ್ ಕವರ್‌ನಲ್ಲಿ ಎಂಡಿಎಂಎ ಮರೆಮಾಚಿ ಇಡಲಾಗಿತ್ತು. ಇದರೊಂದಿಗೆ ಒಂದು ಪೈಪ್, ₹500 ನಗದು ಹಾಗೂ ಎರಡು ಐಫೋನ್ ಮೊಬೈಲ್‌ಗಳನ್ನು ಆರೋಪಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಪೆಟ್ರೋಲಿಂಗ್ ವೇಳೆ ಮುಗು ಹಾಲ್ ಸಮೀಪಕ್ಕೆ ಪೊಲೀಸರು ಬಂದಿರುವುದನ್ನು ಗಮನಿಸಿದ ಇಚ್ಚಾದು, ಬೈಕ್ ನಿಂದ ಇಳಿದು ಸಮೀಪದ ಅಂಗಡಿಗೆ ಓಡಿ ಒಳನುಗ್ಗಲು ಪ್ರಯತ್ನಿಸಿದಾಗ ಅನುಮಾನ ಗೊಂಡ ಪೊಲೀಸರು ಆತನನ್ನು ಹಿಡಿದಿದ್ದಾರೆ..ನಂತರ ನಡೆಸಿದ ತಪಾಸಣೆಯಲ್ಲಿ ಮಾದಕವಸ್ತು ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿವೆ.ಇಚ್ಚಾದುವನ್ನು ಬಂಧಿಸಿ, ಮಾದಕವಸ್ತು , ಬೈಕ್ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!