ವರ್ಕಾಡಿ ಪಂಚಾಯತ್ ನಲ್ಲಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯನ್ನು ಸ್ಥಾಪಿಸಬೇಕು : DYFI

ಮಂಜೇಶ್ವರ: ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಹೈಸ್ಕೂಲ್ ಹಾಗೂ ಹೈಯರ್ ಸೆಕೆಂಡರಿ ಶಾಲೆಗಳನ್ನು ಸ್ಥಾಪಿಸಬೇಕಾಗಿ DYFI ಮಂಜೇಶ್ವರ ಬ್ಲೋಕ್ ಸಮ್ಮೇಳನ ಪ್ರಮೇಯದ ಮೂಲಕ ತಿಳಿಸಿದರೆ.
ಮೀಯಪದವು ನಲ್ಲಿ ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಲ್ಲಾಟ್ ಉದ್ಘಾಟಿಸಿದರು. ಬ್ಲೋಕ್ ಅಧ್ಯಕ್ಷ ಆಕಾಶ್ ಪೈವಳಿಕೆ ಅಧ್ಯಕ್ಷತೆ ವಹಿಸಿದ್ದರು.ಅಡ್ವಾ.ಎಂ ಕೆ ಹಶೀರ್, ಪದ್ಮಜಾ ಕೂಳೂರು,ಆಕಾಶ್ ಪೈವಳಿಕೆ ಸೇರಿರುವ ಪ್ರಸಿಡಿಯಂ ಸಮ್ಮೇಳನವನ್ನು ನಿಯಂತ್ರಿಸಿದರು. ಬ್ಲೋಕ್ ಕಾರ್ಯದರ್ಶಿ ವಿನಯ್ ಕುಮಾರ್ ಚಟುವಟಿಕ ವರದಿಯನ್ನು ಮಂಡಿಸಿದರು. ಪದ್ಮಜಾ ಕೂಳೂರು ಹುತಾತ್ಮ ಪ್ರಮೇಯ ಶಬೀರ್ ಮಾಲಿಗೆ ಶ್ರದ್ಧಾಂಜಲಿ ಪ್ರಮೇಯವನ್ನು ಮಂಡಿಸಿದರು. ಜಿಲ್ಲಾ ಜತೆ ಕಾರ್ಯದರ್ಶಿಯ ಸಾದಿಕ್ ಚೆರುಗೋಳಿ, ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯ ನಾಸಿರುದ್ದೀನ್ ಎಂಬಿವರು ಅಭಿನಂದನೆ ಭಾಷಣ ಮಾಡಿದರು.ಸ್ವಾಗತ ಸಮಿತಿ ಅಧ್ಯಕ್ಷ ರಾಮಚಂದ್ರ ಟಿ ಸ್ವಾಗತಿಸಿದರು. ಉಮೇಶ್ ಟಿ ವಂದಿಸಿದರು.

21 ಮಂದಿ ಬ್ಲೋಕ್ ಸಮಿತಿಯನ್ನು ಸಮ್ಮೇಳನ ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು.

ಆಕಾಶ್ ಪೈವಳಿಕೆ (ಅಧ್ಯಕ್ಷ)
ಉದಯ ಸಿ ಏಚ್ , ಉಮೇಶ್ ಟಿ (ಉಪಾಧ್ಯಕ್ಷರು), ವಿನಯ್ ಕುಮಾರ್ ಬಾಯಾರು (ಕಾರ್ಯದರ್ಶಿ)
ಪದ್ಮಜಾ ಕೂಳೂರು, ಅಡ್ವಾ.ಎಂ ಕೆ ಹಶೀರ್ (ಜತೆ ಕಾರ್ಯದರ್ಶಿ) ಶಬೀರ್ ಮಳಿಗೆ (ಖಜಾಂಜಿ)
ಮಹೇಶ್ ಕುಮಾರ್,ದೀಕ್ಷಿತ್ ಉಪ್ಪಳ (ಕಾರ್ಯಕಾರಣಿ ಸಮಿತಿ ಸದಸ್ಯರು)

SHARE
Loading spinner

Leave a Reply

Your email address will not be published. Required fields are marked *

error: Content is protected !!