ಕುಂಬಳೆಯಲ್ಲಿ ಚಲಿಸುತ್ತಿದ್ದ ಕಾರು ಬೆಂಕಿಗಾಹುತಿ ಅಪಾಯದಿಂದ ಪಾರಾದ ಚಾಲಕ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಯಲ್ಲಿ ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿಯಾದ ಘಟನೆ ಇಂದು ಬೆಳಿಗ್ಗೆ ಕುಂಬಳೆಯಲ್ಲಿ ಸಂಭವಿಸಿದೆ. ಶಿರಿಯಾ ಬತ್ತೇರಿ ಮಹಲ್‌ನ ಮೂಸಾ ಖಲೀಲ್ ಎಂಬವರ ಸ್ವಿಫ್ಟ್ ಕಾರು ಬೆಂಕಿಗಾಹುತಿಯಾ ಗಿದೆ. ಮೂಸಾ ಖಲೀಲ್ ಬಂದ್ಯೋಡು ಭಾಗದಿಂದ ಕುಂಬಳೆ ಪೇಟೆಗೆ ಬರುತ್ತಿದ್ದರು. ಕುಂಬಳೆ ಪೇಟೆ ಸಮೀಪಕ್ಕೆ ತಲುಪಿದಾಗ ಕಾರಿನ ಮುಂಭಾಗದಿಂದ ಹೊಗೆ ಏಳುತ್ತಿರುವುದು ಕಂಡುಬಂದಿದೆ. ಕೂಡಲೇ ಕಾರನ್ನು ನಿಲ್ಲಿಸಿ ಅವರು ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ.

ಕೆಲವೇ ನಿಮಿಷಗಳೊಳಗೆ ಕಾರಿಗೆ ಪೂರ್ಣವಾಗಿ ಬೆಂಕಿ ಆವರಿಸಿದೆ. ವಿಷಯ ತಿಳಿದು ಸೀನಿಯರ್ ಫಯರ್ ಆಫೀಸರ್ ರಫೀಕ್‌ರ ನೇತೃತ್ವದಲ್ಲಿ ಅಗ್ನಶಾಮಕದಳ ತಲುಪಿ

ಬೆಂಕಿ ನಂದಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರುವುದಾಗಿ ಸಂಶಯಿ ಸಲಾಗುತ್ತಿದೆ. ಜಿಲ್ಲೆಯಲ್ಲಿ ವಾಹನಗಳು ಬೆಂಕಿಗಾಹುತಿ ಯಾಗುವ ಪ್ರಕರಣಗಳು ಪದೇ ಪದೇ ಸಂಭವಿಸುತ್ತಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!