ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ಅಭಿನಂದನಾ ಸಭೆ

ಉಪ್ಪಳ : ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ಅಭಿನಂದನಾ ಸಭೆಯು ಇತ್ತೀಚೆಗೆ ಕಯ್ಯಾರು ಪರಂಬಳ ಭಾರತಾ ಮಾತಾ ಸೇವಾ ಟ್ರಸ್ಟ್ ಸಭಾ ಭವನದಲ್ಲಿ ದಲ್ಲಿ ನಡೆಯಿತು ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ರಮ್ಯಾ .ಯನ್ ಸೀತಾ0ಗೊಳಿ ಮಕ್ಕಳ ಸಹಾಯ ವಾಣಿ ಕೇಂದ್ರದ ಮುಖ್ಯಸ್ಥೆ , ಗೌರವ ಮಾರ್ಗದರ್ಶಕಿ ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇವರು ವಹಿಸಿದರು. ಸಭೆಯನ್ನು ಕುಂಬಳೆ ಪೊಲೀಸ್ ಸ್ಟೇಷನ್ ಇದರ ಸರ್ಕಲ್ ಇನ್ಸ್ಪೆಕ್ಟರ್ ಶ್ರೀ ಕೆ ಪಿ ವಿನೋದ್ ಕುಮಾರ್ ಉದ್ಘಾಟಿಸಿದರು .

ದಿಕ್ಸೂಚಿ ಭಾಷಣವನ್ನು ಡಾ! ಅರುಣ್ ಉಳ್ಳಾಲ್ ವಾಗ್ಮಿ , ಉಪನ್ಯಾಸಕರು , ಪ್ರಧಾನ ಸಂಚಾಲಕರು ಅಂಬಾ ಭವನ ಧರ್ಮ ಶಿಕ್ಷಣ ಕೇಂದ್ರ ತೊಕ್ಕೊಟ್ಟು ಇವರು ಮಾಡಿದರು , ಗೌರವ ಉಪಸ್ಥಿತಿ ಶ್ರೀ ಕಿರಣ್ ಕುಮಾರ್ ಪ್ರಧಾನ ಅರ್ಚಕರು ಆದಿಶಕ್ತಿ ಶ್ರೀ ಮಹಾಮ್ಮಾಯಿ ದೇವಸ್ಥಾನ ಪರಂಬಳ ಇವರು ವಹಿಸಿದರು , ಅಥಿತಿಗಳಾಗಿ ಶ್ರೀ ವೆಂಕಪ್ಪ ಶೆಟ್ಟಿ ಕಯ್ಯಾರು ನಿವ್ರತ ಮುಖ್ಯೋಪಾಧ್ಯಾಯಾರು , ಪೈವಳಿಕೆ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ರಾಜೀವಿ ಶೆಟ್ಟಿಗಾರ್ ಕಯ್ಯಾರು, ಭಜನಾ ಶಿಕ್ಷಕಿ ಶ್ರೀಮತಿ ಸಂಧ್ಯಾ ಮಾತಾಜಿ , ಭಾರತ ಮಾತಾ ಸೇವಾ ಟ್ರಸ್ಟ್ ಇದರ ಅಧ್ಯಕ್ಷ ರಾದ ಶ್ರೀ ಗಿರೀಶ್ ಕುಮರ್ ಕಯ್ಯಾರು , ಪ್ರಶಾಂತ್ ಕಯ್ಯಾರು ಸಂಘ ಶಕ್ತಿ ಕಯ್ಯಾರು ಇದರ ಅಧ್ಯಕ್ಷರು ಅತಿಥಿಗಳಾಗಿ ಭಾಗವಹಿಸಿದರು ಸಭೆಯಲ್ಲಿ S S L C ಯಲ್ಲಿ A+ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು ಅಲ್ಲದೇ ಭಜನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ಕೊಡುಗೆಯಾಗಿ ನೀಡಿದ ಕಿರಣ್ ಕುಮಾರ್ , ಶ್ರೀಮತಿ ಜಯಪ್ರಭ ಪ್ರಸಾದ್ ವಾಮಂಜೂರು , ಕಲಾವತಿ ಬಾಲಕೃಷ್ಣ ಕುಂಟೆಗರಡ್ಕ ಇವರು ಮಕ್ಕಳಿಗೆ ಸಮವಸ್ತ್ರ ವಿತರಿಸಿದರು ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ಪ್ರಧಾನ ಸಂಚಾಲಕರಾದ ಸತೀಶ್ ಕುಮಾರ್ ಕಾಪು ಪ್ರಸ್ತಾವಣೆಗೈದು ಸ್ವಾಗತಿಸಿದ ಕಾರ್ಯಕ್ರಮವನ್ನು ದುರ್ಗಾ ಶಕ್ತಿ ಕುಣಿತ ಭಜನಾ ಸಮಿತಿ ಪರಂಬಳ ಕಯ್ಯಾರು ಇದರ ಸಂಚಾಲಕಿ ಶ್ರೀಮತಿ ತಿಲಕ ಕಯ್ಯಾರು ಇವರು ಧನ್ಯವಾದ ವಿತ್ತರು ದುರ್ಗಾ ಶಕ್ತಿ ಕುಣಿತ ಭಜನಾ ಸಮಿತಿಯ ಸಂಚಾಲಕಿ ಶ್ರೀಮತಿ ಸೌಮ್ಯ ಕಯ್ಯಾರು ಕಾರ್ಯಕ್ರಮವನ್ನು ನಿರೂಪಿಸಿದರು ಮಕ್ಕಳಿಂದ ಕುಣಿತ ಭಜನಾ ಪ್ರದರ್ಶನ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!