ಪ್ರಶಾಂತಿಯಲ್ಲಿ ದೈವಿಕ ಅನುಗ್ರಹದೊಂದಿಗೆ ಹೊಸ ಶೈಕ್ಷಣಿಕ ವರ್ಷದ ಪ್ರಾರಂಭ

ಬಾಯಾರು, ಜೂನ್ 2: ಬಾಯಾರಿನ ಪ್ರಶಾಂತಿ ವಿದ್ಯಾ ಕೇಂದ್ರವು ತನ್ನ 2025-2026ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವನ್ನು ಸಾಂಪ್ರದಾಯಿಕ ಸಂಸ್ಕೃತಿ ಆಚಾರಗಳ ವಿಧಿವಿಧಾನ ದೊಂದಿಗೆ ಉತ್ಸಾಹ ಮತ್ತು ಆಧ್ಯಾತ್ಮಿಕ ವೈಭವದೊಂದಿಗೆ ಆಚರಿಸಲಾಯಿತು. ಹೊಸ ಶೈಕ್ಷಣಿಕ ವರ್ಷಕ್ಕೆ ದೈವಿಕ ಆಶೀರ್ವಾದವನ್ನು ಕೋರುತ್ತಾ, ಅರ್ಚಕ ವೇದಮೂರ್ತಿ ಶ್ರೀ ನವನೀತ ಕೃಷ್ಣ ಬೋಳoತಕೋಡಿ ಮತ್ತು ಸಹ-ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನ ಮತ್ತು ಸರಸ್ವತಿ ಹವನದೊಂದಿಗೆ ಶುಭಾರಂಭಗೊಂಡಿತು.

ಈ ಸಂದರ್ಭದಲ್ಲಿ
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೀಡಿದ ಭಾವಪೂರ್ಣ ಭಕ್ತಿಪೂರ್ವ ಭಜನೆಗಳಿಂದ ಪ್ರಶಾಂತ ವಾತಾವರಣವು ಸಮೃದ್ಧವಾಗಿತ್ತು. ನಂತರ ನಡೆದ ಅಭಿನಂದನಾ ಕಾರ್ಯಕ್ರಮವು ವಿದ್ಯಾರ್ಥಿಗಳ ವೇದ ಪಠನದೊಂದಿಗೆ, ಪ್ರಾಂಶುಪಾಲರಾದ ಶ್ರೀ ವಾಮನನ್ ಸರ್ ಅವರ ಆತ್ಮೀಯ ಸ್ವಾಗತದೊಂದಿಗೆ ಪ್ರಾರಂಭವಾಯಿತು. ಉಪಾಧ್ಯಕ್ಷರಾದ ಪೆಲತ್ತಡ್ಕ ಶ್ರೀ ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.

ವೇದಮೂರ್ತಿ ಶ್ರೀ ನವನೀತ ಕೃಷ್ಣ ಬೋಳಂತಕೋಡಿ ಅವರು ‘ದೈವಿಕ ಸತ್ಕಾರ್ಯ ದಿಂದ ಪ್ರಾರಂಭ ವಾದರೆ ಸತ್ಮನಸಿನಲ್ಲಿ, ಸದ್ಭಾವನೆ ಲಭಿಸಿ ವಿದ್ಯಾರ್ಜನೆಯನೆಯಲ್ಲಿ ನೂತನ ಸಾಧನೆ ಮಾಡುವ ಶಕ್ತಿ, ಯುಕ್ತಿ ಆ ಭಗವಂತ ನೀಡುತ್ತಾನೆ ‘ಎಂದು ಆಧ್ಯಾತ್ಮಿಕ ಭಾಷಣ ಚಿಂತನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು, ನಂತರ ಕೌನ್ಸಿಲ್ ಸದಸ್ಯರಾದ ವಿ.ಬಿ. ಹಿರಣ್ಯ ಅವರು ಶೈಕ್ಷಣಿಕ ವರ್ಷದ ಪ್ರಾರಂಭಕ್ಕೆ ಶುಭ ನುಡಿದರು.ಮತ್ತು ಕೋಶಧಿಕಾರಿಯಾಗಿರುವ ಶ್ರೀ ಮಾಣಿಪ್ಪಾಡಿ ನಾರಾಯಣ ಭಟ್ ಅವರಿಂದ ಶ್ರೀ ಸತ್ಯಾಸಾಯಿ ಬಾಬಾರ ಚಿಂತನೆಗಳನ್ನು, ಜೀವನದ ಉತ್ತಮ ತತ್ವಗಳ ಮೂಲಕ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ವ್ಯಕ್ತಪಡಿಸಿದರು.

ಪ್ರಶಾಂತಿ ವಿದ್ಯಾ ಕೇಂದ್ರ ವ್ಯವಸ್ಥಾಪಕರಾದ ಎಚ್. ಮಹಾಲಿಂಗ ಭಟ್, ಟ್ರಸ್ಟ್ ಸದಸ್ಯರಾದ ಶ್ರೀ ಸದಾಶಿವ ಭಟ್, ಶಾಲಾ ಮಾರ್ಗದರ್ಶಕರಾದ ಶ್ರೀ ಕೃಷ್ಣ ನಾಯಕ್,ವೇದಿಕೆಯನ್ನು ಅಲಂಕರಿಸಿದರು. ಕಳೆದ ವರ್ಷ ಹತ್ತನೇ ತರಗತಿಯ AISSE ಪರೀಕ್ಷೆಯಲ್ಲಿ ಅತ್ಯಧಿಕಾ ಅಂಕ ಪಡೆದ ಕುಮಾರಿ ತನ್ವಿ ಶೆಟ್ಟಿ ಅವರ ಅತ್ಯುತ್ತಮ ಸಾಧನೆಗಾಗಿ ಅತಿಥಿ ಗಣ್ಯರ ಸಮ್ಮುಖದಲ್ಲಿ ಎರಡು ದತ್ತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ವಸತಿ ನಿಲಯ ಪಾಲಕರಾದ ಶ್ರೀ ಕೃಷ್ಣ ಪ್ರಸಾದ್ ವಂದನಾರ್ಪಣಾಗೈದರು.ಕನ್ನಡ ಶಿಕ್ಷಕರಾದ ಶ್ರೀ ನಿತ್ಯಾನಂದ ಕೆ ಆರ್ ಬೇಕೂರು ಕಾರ್ಯಕ್ರಮ ವನ್ನು ಸಮರ್ಥವಾಗಿ ನಿರೂಪಿಸಿದರು. ತದನಂತರ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರಿಗೆ ಮಂಗಳಾರತಿ ಮಾಡಲಾಯಿತು. ಹೊಸ ವಿದ್ಯಾರ್ಥಿಗಳನ್ನು ವರ್ಣರಂಜಿತ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು, ನಂತರ ಎಲ್ಲರಿಗೂ ವಿಭೂತಿ ಮತ್ತು ಸಿಹಿತಿಂಡಿಗಳನ್ನು ವಿತರಿಸಲಾಯಿತು. ಅತಿಥಿ ಗಣ್ಯರ ಜತೆ ಎಲ್ಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಮತ್ತು ಹಾಸ್ಟೆಲ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!