ವೈದ್ಯರ ಮೇಲೆ ಹಲ್ಲೆ: ಇಬ್ಬರು ಆರೋಪಿಗಳ ಬಂಧನ

​ಮಂಜೇಶ್ವರ: ಉಪ್ಪಳದ ಆಸ್ಪತ್ರೆಯೊಂದರ ವೈದ್ಯರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಉಪ್ಪಳ ಕೋಡಿಬೈಲು ನಿವಾಸಿ ಉಮ್ಮರ್ (45) ಮತ್ತು ಆತನ ಸಹೋದರ ಹೈದರಾಲಿ (33) ಬಂಧಿತ ಆರೋಪಿಗಳು.

​ಈ ತಿಂಗಳ 4ರಂದು ರಾತ್ರಿ 8:30ರ ಸುಮಾರಿಗೆ ಉಪ್ಪಳ ರೈಲು ನಿಲ್ದಾಣ ರಸ್ತೆಯ ದೇವಿಪ್ರಸಾದ್ ಮಾವೆ ಆಸ್ಪತ್ರೆಯ ಆವರಣದಲ್ಲಿ ವೈದ್ಯ ಕುಮಾರ್ ಶಾಶ್ವತ್ (42) ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಈ ಕುರಿತು ದಾಖಲಾದ ದೂರಿನನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!