ಕಾರಿನಲ್ಲಿ ಸಾಗಿಸುತ್ತಿದ್ದ 103 ಲೀಟರ್ ಗೋವಾ ಮದ್ಯ ವಶ: ಕುಂಜತ್ತೂರು ನಿವಾಸಿ ಬಂಧನ

ಕಾಸರಗೋಡು: ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವಾ ಮೂಲದ ಮದ್ಯವನ್ನು ಕಾಸರಗೋಡು ಎಕ್ಸೈಸು ಅಧಿಕಾರಿಗಳು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ .ಕಾಸರಗೋಡು ರೇಂಜ್ ಎಕ್ಸೈಸ್ ತಂಡ ಹಾಗು ಕಾಸರಗೋಡು ಎಕ್ಸೈಸು ಇಂಟೆಲಿಜೆನ್ಸ್ ಬ್ಯೂರೋ ಸಂಯುಕ್ತವಾಗಿ ನಡೆಸಿದ ಪರಿಶೀಲನೆಯಲ್ಲಿ, ನೀರ್ಚಾಲ್ ಭಾಗದತ್ತ ಮದ್ಯ ಸಾಗಿಸುತ್ತಿದ್ದ KL 57 A 5775 ಸಂಖ್ಯೆಯ ಸ್ವಿಫ್ಟ್ ಕಾರನ್ನು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಕಾರಿನಲ್ಲಿ ಸಾಗಿಸುತ್ತಿದ್ದ 103.68 ಲೀಟರ್ ಗೋವಾ ಮೂಲದ ಅನ್ಯ ರಾಜ್ಯದ IMFL ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಮಂಜೇಶ್ವರಂ ತಾಲ್ಲೂಕಿನ ಕುಂಜತ್ತೂರು ನಿವಾಸಿ ಕೃಷ್ಣಪ್ಪ ಅವರ ಪುತ್ರ ರವಿಕಿರಣ್ ಕೆ.ಎ (38) ಅವರನ್ನು ಎಕ್ಸೈಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಕಾಸರಗೋಡು ರೇಂಜ್ ಕಚೇರಿಯಲ್ಲಿ CR No.56/2026 ಅಡಿ ಅಬಕಾರಿ ಕಾಯ್ದೆಯ 58 ಮತ್ತು 67B ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಎಕ್ಸೈಸ್ ಇನ್ಸ್‌ಪೆಕ್ಟರ್ ವಿನೋದನ್ ಕೆ.ವಿ, ಸಹಾಯಕ ಎಕ್ಸೈಸು ಇನ್ಸ್‌ಪೆಕ್ಟರ್ (ಗ್ರೇಡ್) ದಿವಾಕರನ್ ಎನ್.ವಿ, ಎಕ್ಸೈಸು ಇಂಟೆಲಿಜೆನ್ಸ್ ಬ್ಯೂರೋ ಪ್ರಿವೆಂಟಿವ್ ಅಧಿಕಾರಿ ಸಾಜನ್ ಅಪ್ಯಾಲ್, ಸಿವಿಲ್ ಎಕ್ಸೈಸು ಅಧಿಕಾರಿಗಳಾದ ಅನುರಾಗ್ ಎಂ, ಶ್ಯಾಮ್‌ಜಿತ್ ಎಂ, ನಿಖಿಲ್ ವಿ, ಮಹಿಳಾ ಸಿವಿಲ್ ಎಕ್ಸೈಸ್ ಅಧಿಕಾರಿ ಸ್ವಾತಿ ಯು ಹಾಗೂ ಚಾಲಕ ಮೈಕಲ್ ಜೋಸೆಫ್ ಭಾಗವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!