ಉಮೀದ್ ಪೋರ್ಟಲ್ ಮುಖಾಂತರ ವಫ್ಫ್ ಆಸ್ತಿಯನ್ನು ಬೇಗನೆ ನೋಂದಣಿ ಮಾಡಿಕೊಳ್ಳಿ : ಸ್ಪೀಕರ್ ಯುಟಿ ಖಾದರ್

ಮಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಹಾಗೂ ಜಿಲ್ಲಾ ವಕ್ಫ್ ಇಲಾಖೆಯ ಸಹಯೋಗದಲ್ಲಿ ಉಮೀದ್ ಪೋರ್ಟಲ್-2025 ಈ ವಿಷಯದ ಬಗ್ಗೆ ಮಾಹಿತಿ ಕಾರ್ಯಗಾರವು ನಗರದ ಪುರಭವನ ಮಿನಿ ಟೌನ್‍ಹಾಲ್‍ನಲ್ಲಿ ನಡೆಯಿತು.

ಕರ್ನಾಟಕ ಸ್ಪೀಕರ್ ಯುಟಿ ಖಾದರ್ ಉಮೀದ್ ಪೋರ್ಟಲ್ ಕಾರ್ಯಕಾರದ ಮಾಹಿತಿಯನ್ನು ನೀಡಿ , ಉಮೀದ್ ಪೋರ್ಟಲ್ ಮುಖಾಂತರ ವಫ್ಫ್ ಆಸ್ತಿಯನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇದು ಆನ್ಲೈನ್ ವೇದಿಕೆ ಆಗಿರುವುದರಿಂದ ಇತರೆಡೆಗಳಲ್ಲಿ ಇದ್ದರೂ ನೋಂದಣಿಗೆ ಅವಕಾಶ ಇದೆ. ಉಮೀದ್ ಪೋರ್ಟಲ್ ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗುವ ಸಾದ್ಯತೆ ಇರುವುದರಿಂದ ಕಾಲ್ ಸೆಂಟರ್ ನನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ತೆರೆಯಬೇಕು. ಮದರಸ, ಮಸೀದಿಯ ವ್ಯಾಪ್ತಿಯಲ್ಲಿ ಬರುವ ಇಂಜಿನಿಯರ್ ಅಥವಾ ತಾಂತ್ರಿಕ ನಿಪುಣರು ಈ ಉಮೀದ್ ಪೋರ್ಟಲ್ ಬಗ್ಗೆಗಿನ ಅರಿವನ್ನು ಮತ್ತು ಯಾವ ರೀತಿಯಾಗಿ ಆಸ್ತಿಯ ನೋಂದಣಿ ಮಾಡಿಕೊಳ್ಳಬಹುದೆಂದು ಸಾಮಾನ್ಯರಿಗೆ ತಿಳಿಸಿಕೊಡಬೇಕು . ಇದರಿಂದ ಈ ಸಮಸ್ಯೆ ಗ್ರಾಮೀಣ ಮಟ್ಟದಲ್ಲಿ ಯಶಸ್ವಿ ಕಾಣಲಿದೆ . ಹೊಸ ತಾಂತ್ರಿಕತೆಯ ಯುಗದಲ್ಲಿ ಈ ರೀತಿಯ ತಂತ್ರಜ್ಞಾನದ ಅರಿವನ್ನು ಜನಸಾಮಾನ್ಯರಿಗೆ ನೀಡಬೇಕು ಆದರೆ ಮಾತ್ರ ನೋಂದಣಿ ಸಾಧ್ಯವೆಂದು ತಿಳಿಸಿದರು .

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅನ್ವರ್ ಬಾಷಾ , ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷರಾದ ಖಾಲಿದ್ , ನಾಜಿರ್ , ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ಸಹಿತ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!