ಉದಯಗಿರಿ ಶ್ರೀ ಮಹಾ ಕಾಳಿ ದೇವಾಲಯಕ್ಕೆ ಮುಖ್ಯದ್ವಾರ ಲೋಕಾರ್ಪಣೆ

ಕಾಸರಗೋಡು: ಜಿಲ್ಲೆಯ ಹೊಸದುರ್ಗ ತಾಲೂಕಿನ ವಾಣಿಯಂಪಾರೆ ಸಮೀಪದ ಇತಿಹಾಸ ಪ್ರಸಿದ್ಧ ಉದಯಗಿರಿ ಶ್ರೀ ಮಹಾಕಾಳಿ ದೇವಾಲಯದಲ್ಲಿ ಸಪ್ತ ದಿನಗಳ ಭಜನಾ ಪ್ರದಕ್ಷಿಣೆ ಹಾಗೂ ಪ್ರತಿಷ್ಠಾ ಮಹೋತ್ಸವ ಭಕ್ತಿಭಾವದಿಂದ ನೆರವೇರಿತು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಆರಾಧನೆಯಲ್ಲಿ ತೊಡಗಿದ್ದರು.

ಈ ಸಂದರ್ಭದಲ್ಲಿ ಶ್ರೀ ಮಹಾಕಾಳಿ ಕ್ಷೇತ್ರಕ್ಕೆ ಕೋಟೆಯಾರ್ ಸಮಾಜದ ಯುವಕ ಸಮಿತಿಯಿಂದ ನಿರ್ಮಿಸಲಾದ ನೂತನ ಮುಖ್ಯದ್ವಾರದ ಲೋಕಾರ್ಪಣೆ ನೆರವೇರಿತು.

ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರು ಹಾಗೂ ಬಾಂಧವರು ಉಪಸ್ಥಿತರಿದ್ದು, ಧಾರ್ಮಿಕ ಆಚರಣೆಗಳು ಸಾಂಪ್ರದಾಯಿಕವಾಗಿ ನಡೆದವು.

SHARE
Loading spinner

Leave a Reply

Your email address will not be published. Required fields are marked *

error: Content is protected !!